Skip to main content


ಯಶ್ ಮಾಡಿಬಿಟ್ಟರೇ ಮಹಾಪರಾಧ? ಕುದಿಯುತ್ತಿದೆ ಸುದೀಪ್ ಅಭಿಮಾನಿಗಳ ರಕ್ತ!

'ಹಮ್ ಫಿಟ್ ತೋ ಇಂಡಿಯಾ ಫಿಟ್' (#HumFitThoIndiaFit) ಎಂಬ ಹ್ಯಾಶ್ ಟ್ಯಾಗ್ ಅಡಿ ಫಿಟ್ನೆಸ್ ಅಭಿಯಾನವನ್ನ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಆರಂಭಿಸಿದರು. ಕಿಚ್ಚ ಸುದೀಪ್ ಗೆ ಕ್ರಿಕೆಟರ್ ವಿನಯ್ ಕುಮಾರ್ ಫಿಟ್ನೆಸ್ ಚಾಲೆಂಜ್ ಹಾಕಿದರು. ವಿನಯ್ ಕುಮಾರ್ ಎಸೆದ ಸವಾಲು ಸ್ವೀಕರಿಸಿ ಸುದೀಪ್ ಯಶಸ್ವಿ ಆದರು. ಬಳಿಕ ರಾಕಿಂಗ್ ಸ್ಟಾರ್ ಯಶ್, ಪತ್ನಿ ಪ್ರಿಯಾ, ಶಿವಣ್ಣ, ರಿತೇಶ್ ದೇಶ್ಮುಖ್, ಸೊಹೈಲ್ ಖಾನ್ ರವರಿಗೆ ಸುದೀಪ್ ಸವಾಲೆಸೆದರು.

ಸುದೀಪ್ ಹಾಕಿದ ಚಾಲೆಂಜ್ ಸ್ವೀಕರಿಸಿ ನಟ ಯಶ್ ಒಂದು ವಿಡಿಯೋ ಮಾಡಿದರು. ಆ ವಿಡಿಯೋದಲ್ಲಿ, ''ಹಾಯ್ ಸುದೀಪ್, ನೀವು ನನಗೊಂದು ಚಾಲೆಂಜ್ ಕೊಟ್ಟಿದ್ದೀರಾ. ಥ್ಯಾಂಕ್ಯು. ನಾವು ನಟರು... ಹೀಗಾಗಿ ನಾವು ವರ್ಕೌಟ್ ಮಾಡುತ್ತಲೇ ಇರುತ್ತೇವೆ. ಲೈಫ್ ನಲ್ಲಿ ಫಿಟ್ಟಾಗಿ ಇರಲು ಸಾಧ್ಯವೇ ಇಲ್ಲ ಎಂಬಂತೆ ಕಾಣುವ ನನ್ನ ಸ್ನೇಹಿತ ಚೇತನ್ ಕೈಯಲ್ಲಿ ನಿಮ್ಮ ಟಾಸ್ಕ್ ಮಾಡಿಸುತ್ತೇನೆ'' ಅಂತ ಯಶ್ ಹೇಳಿದ್ದಾರೆ. ಈ ವಿಡಿಯೋದಲ್ಲಿ ಸುದೀಪ್ ಗೆ ''ಸುದೀಪ್ ಸರ್'', ''ಸುದೀಪ್ ಅವರೇ'' ಎಂದು ಯಶ್ ಹೇಳಿಲ್ಲ. ಏಕಾಏಕಿ ''ಹಾಯ್ ಸುದೀಪ್'' ಅಂತ ಯಶ್ ಹೇಳಿರುವುದರಿಂದ ''ಸುದೀಪಣ್ಣಗೆ ಯಶ್ ಗೌರವ ಕೊಟ್ಟಿಲ್ಲ'' ಅಂತ ಸುದೀಪ್ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ.

ಫೇಸ್ ಬುಕ್ ನಲ್ಲಿ ಯಶ್ ಪೋಸ್ಟ್ ಮಾಡಿದ ವಿಡಿಯೋ ನೋಡಿ ''ಒಬ್ಬ ಹೀರೋಗೆ ಗೌರವ ಕೊಡುವುದನ್ನು ಯಶ್ ಕಲಿಯಬೇಕು. ಯಶ್ ಗಿಂತ ಸುದೀಪ್ ಹದಿನಾಲ್ಕು ವರ್ಷ ದೊಡ್ಡವರು'' ಎಂದು ಸುದೀಪ್ ಅಭಿಮಾನಿಗಳು ತಮ್ಮ ಬೇಸರವನ್ನ ಹೊರ ಹಾಕಿದರು. ಸುದೀಪ್ ಹಾಗೂ ಯಶ್ ಇಬ್ಬರೂ ಕನ್ನಡ ನಟರೇ. ಆದರೂ, ಅಭಿಮಾನಿಗಳು ಮಾತ್ರ ಅಭಿಮಾನದ ಪರಾಕಾಷ್ಟೆ ಮೆರೆಯಲು ಹೋಗಿ ಫೇಸ್ ಬುಕ್ ನಲ್ಲಿ ಬಡಿದಾಡಿಕೊಳ್ತಿದ್ದಾರೆ.    

short by Pawan / more at Filmibeat


Comments