Skip to main content


ಮೂರು ವರ್ಷಗಳಲ್ಲಿ ಚೀನಕ್ಕೆ ಆರ್ಥಿಕ ಹಿಂಜರಿತ; ಭಾರತಕ್ಕಿಲ್ಲ ಆತಂಕ

ಮುಂದಿನ ಮೂರು ವರ್ಷಗಳಲ್ಲಿ ಹಾಂಕಾಂಗ್‌ ಮತ್ತು ಚೀನ ಮಾರುಕಟ್ಟೆಗಳು ಆರ್ಥಿಕ ಹಿಂಜರಿತದತ್ತ ಸರಿಯಲಿವೆ. ಏಷ್ಯಾ ದೇಶಗಳಾಗಿರುವ ಭಾರತ ಮತ್ತು ದಕ್ಷಿಣ ಕೊರಿಯಾಗಳಿಗೆ ಈ ಆತಂಕ ಇಲ್ಲ. ಅವುಗಳು ಸುರಕ್ಷಿತವಾಗಿವೆ ಎಂದು ನೊಮುರಾ ಸಿಂಗಾಪುರ್‌ ಲಿಮಿಟೆಡ್‌ ನಡೆಸಿದ ಅಧ್ಯಯನದಲ್ಲಿ ವ್ಯಕ್ತವಾಗಿದೆ.

ಸದ್ಯ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಗಳೇ ಅಭಿವೃದ್ಧಿ ಹೊಂದಿದ ದೇಶಗಳ ಮಾರುಕಟ್ಟೆಗಿಂತ ಅಪಾಯದಲ್ಲಿವೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. 'ಹಾಂಕಾಂಗ್‌ ಮತ್ತು ಚೀನದ ಅರ್ಥ ವ್ಯವಸ್ಥೆ ಮುಂದಿನ 3 ವರ್ಷಗಳಲ್ಲಿ ಹಿಂಜರಿತಕ್ಕೆ ಒಳಗಾಗಲಿವೆ. ಎರಡೂ ದೇಶಗಳಲ್ಲಿ ದೇಶೀಯವಾಗಿ ಹಲವು ವಸ್ತುಗಳಿಗೆ ಬೇಡಿಕೆ ಕುಸಿಯಲಿದೆ. 1997-98ನೇ ವಿತ್ತೀಯ ವರ್ಷದಲ್ಲಿ ಏಷ್ಯಾದ ಹಣಕಾಸು ವ್ಯವಸ್ಥೆ ಅನುಭವಿಸಿದ್ದ ಪರಿಸ್ಥಿತಿಯನ್ನೇ ಅನುಭವಿಸಲಿದೆ' ಎಂದು ನೋಮುರಾ ಸಂಸ್ಥೆಯ ಸುಬ್ಬರಾಮನ್‌ ಮತ್ತು ಮೈಕೆಲ್‌ ಲೂ ನಡೆಸಿದ ಅಧ್ಯಯದಲ್ಲಿ ಪ್ರಸ್ತಾವಿಸಿದ್ದಾರೆ.     

short by Pawan / more at Udayavani

Comments