Skip to main content


ಪಾಕ್‌ ದಾಳಿ: ಇಬ್ಬರು ಯೋಧರು ಹುತಾತ್ಮ

ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್‌ ಪಡೆಗಳು ಕದನ ವಿರಾಮ ಉಲ್ಲಂಘನೆ ಮಾಡಿ ನಡೆಸಿದ ಗುಂಡಿನ ದಾಳಿಗೆ ಒಬ್ಬ ಅಧಿಕಾರಿ ಸೇರಿದಂತೆ ಗಡಿ ಭದ್ರತಾ ಪಡೆಯ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. 2003ರ ಕದನ ವಿರಾಮ ಒಪ್ಪಂದವನ್ನು ಬದ್ಧತೆಯಿಂದ ಅನುಷ್ಠಾನಗೊಳಿಸಲು ಪರಸ್ಪರ ಸಮ್ಮತಿ ಸೂಚಿಸಿದ ಒಂದೇ ವಾರದಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ. "ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಗುಂಡಿನ ದಾಳಿ ನಿಲ್ಲಿಸದಿದ್ದರೆ ರಂಜಾನ್‌ ಕದನ ವಿರಾಮ ಘೋಷಣೆ ಹಿಂಪಡೆಯುವುದು ಅನಿವಾರ್ಯವಾಗುತ್ತದೆ," ಎಂದು ಹನ್ಸರಾಜ್‌ ಆಹಿರ್‌, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹೇಳಿದ್ದಾರೆ.

short by Shraman Jain / more at Vijaya Karnataka

Comments