Skip to main content


ವಿಲನ್ ಹಾಡಿನ ವಿವಾದದ ಬಗ್ಗೆ ಶಿವಣ್ಣ ಹೇಳಿದ್ದೇನು?

ಈ ಚಿತ್ರದಲ್ಲಿ ಶಿವಣ್ಣನಿಗಾಗಿ ಬರೆದ ಹಾಡಿನಲ್ಲಿ ‘ನಿನ್ನೆ ಮೊನ್ನೆ ಬಂದೋರೆಲ್ಲಾ ನಂ.1 ಅಂತಾರೆ’ ಎಂದು ಸಾಲು ಬರುತ್ತದೆ. ಇದು ಬೇರೆ ನಟರಿಗೆ ಕೊಟ್ಟ ಟಾಂಗ್ ಎಂದು ಇದೀಗ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಬಗ್ಗೆ ಇದೀಗ ಶಿವರಾಜ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ನಟ ಶಿವರಾಜ್ ಕುಮಾರ್ ‘ನನಗೆ ಈ ಹಾಡಿನ ವಿವಾದದ ಬಗ್ಗೆ ಏನೂ ಗೊತ್ತಿಲ್ಲ’ ಎಂದಿದ್ದಾರೆ. ಆದರೆ ಸ್ಯಾಂಡಲ್ ವುಡ್ ನಲ್ಲಿ ಈ ಹಾಡು ಮತ್ತೊಮ್ಮೆ ಸ್ಟಾರ್ ವಾರ್ ಗೆ ಕಾರಣವಾಗಿರುವುದರಲ್ಲಿ ಸಂಶಯವಿಲ್ಲ.   

short by Pawan!

Comments