Skip to main content


ನೀಟ್ ಫಲಿತಾಂಶ ಪ್ರಕಟ; ಬಿಹಾರದ ಕಲ್ಪನಾ ಕುಮಾರಿ ಟಾಪರ್

2018ರ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಬಿಹಾರ ಮೂಲದ ಕಲ್ಪನಾ ಕುಮಾರಿ ಮೊದಲ ರಾಂಕ್ ಪಡೆದಿದ್ದಾರೆ. ಕಲ್ಪನಾ ಕುಮಾರಿ ಅವರು 720ರಲ್ಲಿ 691 ಅಂಕ ( ಶೇ.99.99) ಪಡೆಯುವ ಮೂಲಕ ಸಿಬಿಎಸ್ ಇ ನೀಟ್ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಭೌತಶಾಸ್ತ್ರದಲ್ಲಿ 171(180ರಲ್ಲಿ) ಅಂಕ, ರಸಾಯನ ಶಾಸ್ತ್ರ 160(180ರಲ್ಲಿ), ಜೀವಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದಲ್ಲಿ 360ರಲ್ಲಿ 360 ಅಂಕ ಗಳಿಸಿದ್ದಾರೆ. ಸರ್ಕಾರಿ ಅಥವಾ ಖಾಸಗಿ ವೈದ್ಯಕೀಯ ಕಾಲೇಜ್‍ಗಳಲ್ಲಿ ಯಾವುದೇ ಪದವಿ ವೈದ್ಯಕೀಯ ಕೋರ್ಸ್ (ಎಮ್‍ಬಿಬಿಎಸ್/ದಂತವೈದ್ಯಕೀಯ ಕೋರ್ಸ್ ಬಿಡಿಎಸ್) ಅಥವಾ ಸ್ನಾತಕೋತ್ತರ ಕೋರ್ಸ್ (ಎಮ್‍ಡಿ, ಎಮ್‌ಎಸ್) ಅಭ್ಯಸಿಸಲು ಬಯಸುವ ವಿದ್ಯಾರ್ಥಿಗಳಿಗೆ ನಡೆಸುವ ಪರೀಕ್ಷೆ ಇದಾಗಿದೆ.

short by Shraman Jain / more at Udayavani

Comments