Skip to main content


ಏರ್ ಇಂಡಿಯಾದ ಸಂಪೂರ್ಣ ಮಾರಾಟಕ್ಕೆ ಮುಂದಾದ ಸರ್ಕಾರ

ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಹರಾಜಿನ ಪ್ರಯತ್ನದಲ್ಲಿ ಹಿನ್ನಡೆ ಅನುಭವಿಸಿರುವ ಕೇಂದ್ರ ಸರ್ಕಾರ, ಈಗ ಅದರ ಸಂಪೂರ್ಣ ಶೇ 100ರಷ್ಟು ಷೇರುಗಳ ಮಾರಾಟಕ್ಕೆ ತೀರ್ಮಾನಿಸಿದೆ. ಸರ್ಕಾರವು ಏರ್ ಇಂಡಿಯಾದಲ್ಲಿ ಶೆ 24ರಷ್ಟು ಬಂಡವಾಳವನ್ನು ಉಳಿಸಿಕೊಂಡು ಉಳಿದ ಶೇ 76ರಷ್ಟನ್ನು ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿತ್ತು. ಈ ಸಂಬಂಧ ಎರಡು ಹಂತದ ಬಿಡ್ ಕರೆಯಲಾಗಿತ್ತು. ಮೊದಲ ಹಂತದಲ್ಲಿ ಏರ್ ಇಂಡಿಯಾದ ಬಿಡ್ಡಿಂಗ್‌ಗೆ ಆಸಕ್ತಿ ವ್ಯಕ್ತಪಡಿಸುವುದು. ಎರಡನೆಯ ಹಂತದಲ್ಲಿ ಆಯ್ದ ಆಸಕ್ತರನ್ನು ಬಿಡ್ಡಿಂಗ್‌ಗೆ ಕರೆಯುವುದು ಎಂದು ಸರ್ಕಾರ ತೀರ್ಮಾನಿಸಿತ್ತು. ಆದರೆ, ಮೊದಲ ಹಂತದಲ್ಲಿಯೇ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿತ್ತು. ಯಾವ ಸಂಸ್ಥೆಯೂ ಏರ್ ಇಂಡಿಯಾದ ಬಿಡ್‌ನಲ್ಲಿ ಭಾಗವಹಿಸಲು ಆಸಕ್ತಿ ತೋರಿಸಿರಲಿಲ್ಲ.    

short by Pawan / more at Oneindia

Comments