Skip to main content


ಖಾತೆ ಕೈತಪ್ಪಿದ ಆಕ್ರೋಶದಲ್ಲಿ ಮಾಧ್ಯಮದವರ ಮೇಲೆ ರೇಗಾಡಿದ್ರಾ ರೇವಣ್ಣ?

ಬುಧವಾರದಂದು ಮೈತ್ರಿ ಸರ್ಕಾರದ ನೂತನ ಸಚಿವರ ಪ್ರಮಾಣವಚನಕ್ಕೆ ಸಮಯ ನಿಗದಿಯಾಗಿದೆ. ಆದರೆ ಸಚಿವಾಕಾಂಕ್ಷಿಗಳ ಒತ್ತಡ ತೀವ್ರವಾಗಿರುವ ಹಿನ್ನೆಲೆಯಲ್ಲಿ ಯಾರ್ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬ ಗೊಂದಲದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರುಗಳಿದ್ದಾರೆ. ಕಾಂಗ್ರೆಸ್ ಭಾವೀ ಸಚಿವರುಗಳ ಪಟ್ಟಿ ಹೈಕಮಾಂಡ್ ಪರಿಶೀಲನೆಗಾಗಿ ದೆಹಲಿಗೆ ರವಾನೆಯಾಗಿದ್ದರೆ ಇತ್ತ ಜೆಡಿಎಸ್ ಸಚಿವರ ಪಟ್ಟಿ ಪಕ್ಷದ ವರಿಷ್ಠ ಹೆಚ್.ಡಿ. ದೇವೇಗೌಡರ ಪದ್ಮನಾಭನಗರ ನಿವಾಸದಲ್ಲಿ ಸಿದ್ಧವಾಗುತ್ತಿದೆ. ಇಂದು ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ದೇವೇಗೌಡರ ನಿವಾಸದಲ್ಲಿ ನಡೆದಿದ್ದು, ಈ ಸಭೆಗೆ ಆಗಮಿಸಿದ ಶಾಸಕ ಹೆಚ್.ಡಿ. ರೇವಣ್ಣ ಮಾಧ್ಯಮದವರ ವಿರುದ್ಧ ಹರಿಹಾಯ್ದಿದ್ದಾರೆ.   

short by Pawan / more at Kannadadunia

Comments