Skip to main content


ಅಮೇರಿಕಾ ವೇಶ್ಯಾವಾಟಿಕೆಯಲ್ಲಿ ಕನ್ನಡ ನಟಿಯರು.!

ಅಮೇರಿಕಾದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಯಲ್ಲಿ ತೆಲುಗು ನಟಿಯರನ್ನ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಇತ್ತೀಚಿಗೆ ಯುಎಸ್ ಪೊಲೀಸರು ಬಹಿರಂಗಪಡಿಸಿದ್ದರು. ಆಶ್ಚರ್ಯವೆಂದರೇ ಈ ವೇಶ್ಯಾವಾಟಿಕೆಯಲ್ಲಿ ತೆಲುಗು ನಟಿಯರ ಜೊತೆ ಕನ್ನಡ ನಟಿಯರು ಇದ್ದಾರೆ ಎನ್ನಲಾಗಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಅನೇಕ ನಟಿಯರ ಜೊತೆ ಅಮೇರಿಕಾದ ಕಾರ್ಯಕ್ರಮ ಆಯೋಜಕರು ಸಂಪರ್ಕದಲ್ಲಿದ್ದು, ಬೇಕಾದವರನ್ನ ಅಲ್ಲಿಗೆ ಕರೆಯಿಸಿಕೊಳ್ಳುತ್ತಾರಂತೆ.

ಈ ಪ್ರಕರಣವನ್ನ ಅಮೇರಿಕಾ ಪೊಲೀಸರು ಭೇದಿಸಿದ್ದು, ತೆಲುಗು ಮೂಲದ ಸಹನಿರ್ಮಾಪಕ ಕಿಶನ್ ಮುಡುಗುಮುಡಿ ದಂಪತಿ ಸೇರಿದಂತೆ ಕೆಲವು ನಟಿಯರನ್ನ ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ. ಇವರನ್ನ ತನಿಖೆಗೆ ಒಳಪಡಿಸಿದ ನಂತರ ಇನ್ನು ಹಲವು ಭಯಾನಕ ಸತ್ಯ ಸಂಗತಿಗಳು ಪೊಲೀಸರಿಗೆ ಸಿಕ್ಕಿವೆ ಎಂಬ ಮಾಹಿತಿ ಇದೆ. ಆದ್ರೆ, ಭಾರತದ ಯಾವ ನಟಿಯರು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನ ಬಿಟ್ಟುಕೊಟ್ಟಿಲ್ಲ.   

short by Pawan / more at Filmibeat

Comments