Skip to main content


ನಟ ಯಶ್ ಕಾಲ್ ಶೀಟ್ ಪಡೆದ ಮತ್ತೊಬ್ಬ ನಿರ್ದೇಶಕ

'ಕೆ ಜಿ ಎಫ್' ನಂತರ 'ಕೆ ಜಿ ಎಫ್' ಎರಡನೇ ಭಾಗ ಬರಲಿದೆ. ಆ ಬಳಿಕ ನಿರ್ದೇಶಕ ಹರ್ಷ ಚಿತ್ರದಲ್ಲಿ ನಟ ಯಶ್ ನಟಿಸಲಿದ್ದಾರೆ. ಅದು ಮುಗಿದ ಮೇಲೆ 'ಮಫ್ತಿ' ಖ್ಯಾತಿಯ ನರ್ತನ್ ಅವರು ಯಶ್ ಗೆ ಡೈರೆಕ್ಷನ್ ಮಾಡಲಿದ್ದಾರೆ. ಈ ಎಲ್ಲ ಸಿನಿಮಾಗಳ ಜೊತೆಗೆ ಈಗ ಕನ್ನಡದ ಮತ್ತೊಬ್ಬ ನಿರ್ದೇಶಕನಿಗೆ ಯಶ್ ಕಾಲ್ ಶೀಟ್ ಸಿಕ್ಕಿದೆ. ಕನ್ನಡದ ನಿರ್ದೇಶಕ ಅನಿಲ್ ಕುಮಾರ್ ಈಗ ಯಶ್ ಗಾಗಿ ಒಂದು ಕಥೆ ಮಾಡುತ್ತಿದ್ದಾರಂತೆ. ರಾಕಿಂಗ್ ಸ್ಟಾರ್ ಕಡೆಯಿಂದ ಅನಿಲ್ ಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸದ್ಯ ಬರವಣಿಗೆ ಕೆಲಸದಲ್ಲಿ ಅವರು ತೊಡಗಿದ್ದಾರೆ. ಸೋ, ಸ್ಯಾಂಡಲ್ ವುಡ್ ಓಡುವ ಕುದುರೆ ಯಶ್ ಕಾಲ್ ಶೀಟ್ ಸಿಕ್ಕ ಖುಷಿಯಲ್ಲಿ ಸದ್ಯ ಅನಿಲ್ ಇದ್ದಾರೆ.   

short by Pawan!

Comments