Skip to main content


ಪತ್ನಿಯ ಎಟಿಎಂ ಕಾರ್ಡ್ ಪತಿ ಬಳಸುವಂತಿಲ್ಲ; ಎಸ್ ಬಿಐ ವಾದಕ್ಕೆ ಮನ್ನಣೆ ನೀಡಿದ ಕೋರ್ಟ್

ಬ್ಯಾಂಕ್ ಗ್ರಾಹಕರೇ ಇನ್ನು ಮುಂದೆ ನಿಮ್ಮ ಪತಿ ಅಥವಾ ಪತ್ನಿಯ ಎಟಿಎಂ ಕಾರ್ಡ್ ಗಳನ್ನು ನೀವು ಬಳಕೆ ಮಾಡುವಂತಿಲ್ಲ.. ಒಂದು ವೇಳೆ ಬಳಕೆ ಮಾಡಿದರೆ ಅದರಿಂದಾಗುವ ಹಣ ನಷ್ಟಕ್ಕೆ ನೀವೇ ಹೊಣೆ.

ಹೌದು. ಅಂತಹುದೊಂದು ವಾದವನ್ನು ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಮಂಡಿಸಿದ್ದು, ಇದಕ್ಕೆ ಕೋರ್ಟ್ ಕೂಡ ಸಮ್ಮತಿ ಸೂಚಿಸಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್ ಇಂತಹ ಅಭಿಪ್ರಾಯಪಟ್ಟಿದ್ದು, ಬ್ಯಾಂಕ್ ನಿಯಮಗಳು ಮತ್ತು ಎಟಿಎಂ ಪಿನ್ ನಿಯಮಗಳ ಅನ್ವಯ ಪತಿ, ಪತ್ನಿ, ಸ್ನೇಹಿತ, ಸಂಬಂಧಿ ಇನ್ಯಾರೇ ಆಗಿರಲಿ ಒಬ್ಬರ ಎಟಿಎಂ ಕಾರ್ಡ್ ಅನ್ನು ಮತ್ತೊಬ್ಬರು ಬಳಕೆ ಮಾಡುವಂತಿಲ್ಲ.

ಒಂದು ವೇಳೆ ಅನಧಿಕೃತವಾಗಿ ಅಥವಾ ಕಾರ್ಡ್ ಮಾಲೀಕನ ಒಪ್ಪಿಗೆ ಮೇರೆಗೆ ಕಾರ್ಡ್ ಬಳಕೆ ಮಾಡಿದಾಗ ಆಗುವ ಹಣ ನಷ್ಟಕ್ಕೆ ಖಾತೆದಾರ ಅಥವಾ ಕಾರ್ಡ್ ಬಳಕೆದಾರರೇ ಕಾರಣರಾಗುತ್ತಾರೆ ಎಂದು ಕೋರ್ಟ್ ಹೇಳಿದೆ.   

short by Pawan / more at Kannada Prabha

Comments