Skip to main content


ಮನೆಕಟ್ಟೋರಿಗೆ ಶಾಕಿಂಗ್ ನ್ಯೂಸ್ : ಗೃಹ ಸಾಲದ ಇಎಂಐ ಅಲ್ಪ ಏರಿಕೆ ಸಂಭವ

ದಿನ ಬಳಕೆ ಅಗತ್ಯ ವಸ್ತಗಳು ಸೇರಿದಂತೆ ಪೆಟ್ರೋಲಿಯಂ, ಗ್ಯಾಸ್ ಸಿಲೆಂಡರ್ ಬೆಲೆ ಹೆಚ್ಚಳದ ಬಿಸಿಯಲ್ಲಿರುವ ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಬಂದಿದೆ. ಒಂದು ವೇಳೆ ಸಾಲದಲ್ಲಿ ಮನೆ ಅಥಾವ ವಾಹನವನ್ನು ಖರೀದಿ ಮಾಡಿದ್ದರೆ ನಿಮ್ಮ ವಾಹನ ಸಾಲದ ಮಾಸಿಕ ಕಂತುಗಳು ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಹೌದು. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) 10 ಬೇಸಿಸ್‌ ಪಾಯಿಂಟ್‌ನಷ್ಟು(ಶೇ.0.10) ಎಂಸಿಎಲ್‌ಆರ್‌ ದರವನ್ನು ಹೆಚ್ಚಿಸಿದ್ದು, ಜೂ.1ರಿಂದಲೇ ಅನ್ವಯವಾಗಲಿದೆ. ಇದರಿಂದ ಗೃಹ ಸಾಲ, ವಾಹನ ಸಾಲದ ಮಾಸಿಕ ಕಂತುಗಳು(ಇಎಂಐ) ಅಲ್ಪ ಪ್ರಮಾಣದಲ್ಲಿ ಏರಿಕೆಯಾಗುತ್ತವೆ ಎನ್ನಲಾಗಿದೆ. ಒಂದು ವರ್ಷದ ಅವಧಿಗೆ ಶೇ.8.15ರಷ್ಟಿದ್ದ ಎಂಸಿಎಲ್‌ಆರ್‌ ಈಗ ಶೇ.8.25ಕ್ಕೆ ಹೆಚ್ಚಳವಾಗಿದ್ದು, ಕಳೆದ ಮೂರು ವರ್ಷದ ಅವಧಿಯ ಎಂಸಿಎಲ್‌ಆರ್‌ ಶೇ.8.35ರಿಂದ ಶೇ.8.45ಕ್ಕೆ ಏರಿಕೆಯಾಗಿವೆ. ಹೀಗಾಗಿ ಮನೆ ಹಾಗೂ ವಾಹನಗಳಿಗೆ ಗ್ರಾಹಕರು ತೆಗೆದುಕೊಂಡ ಸಾಲದ ಮಾಸಿಕ ಕಂತುಗಳಲ್ಲಿ ವಿವಿಧ ಅವಧಿಗೆ ತಕ್ಕಂತೆ ಎಂಸಿಎಲ್‌ಆರ್‌ ದರಗಳು ಅನ್ವಯವಾಗುತ್ತವೆ.    

short by Pawan / more at Kannada News Now

Comments