Skip to main content


ಡಾಲಿಯ ಭೈರವ ಗೀತಾ ಶುರು... ಭಯಂಕರ ಲುಕ್‌ನಲ್ಲಿ ಧನಂಜಯ್

ಕೆಲ ದಿನಗಳ ಹಿಂದೆ ವರ್ಮಾ ಹಾಗೂ ಧನಂಜಯ್‌ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಸದ್ಯ ಈ ಚಿತ್ರ ಶುರುವಾಗುತ್ತಿದೆ. ಆದರೆ, ಒಂದು ಸಣ್ಣ ಬದಲಾವಣೆ ಏನೆಂದರೆ, ಈ ಚಿತ್ರವನ್ನು ರಾಮ್ ಗೋಪಾಲ್ ವರ್ಮ ನಿರ್ದೇಶಿಸುತ್ತಿಲ್ಲ. ಬರೀ ನಿರ್ಮಿಸುತ್ತಿದ್ದಾರಷ್ಟೇ. ಅವರೊಂದಿಗೆ `ಅಂದರ್ ಬಾಹರ್' ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಭಾಸ್ಕರ್ ಸಹ ಈ ಚಿತ್ರದ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.

ಅಂದ ಹಾಗೆ, ಈ ಚಿತ್ರಕ್ಕೆ `ಭೈರವ ಗೀತಾ' ಎಂಬ ಹೆಸರನ್ನು ಇಡಲಾಗಿದೆ. ಈ ಚಿತ್ರವನ್ನು ವರ್ಮ ಅವರ ಶಿಷ್ಯ ಸಿದ್ಧಾರ್ಥ್ ಎನ್ನುವವರು ನಿರ್ದೇಶಿಸುತ್ತಿದ್ದು, ಅವರೇ ಕಥೆ ಮತ್ತು ಚಿತ್ರಕಥೆಯನ್ನು ರಚಿಸಿದ್ದಾರೆ. ಈ ಚಿತ್ರವು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಲಿದ್ದು, ಎರಡೂ ಚಿತ್ರಗಳಲ್ಲಿ ಧನಂಜಯ್ ನಟಿಸುತ್ತಿದ್ದಾರೆ. ಈ ಮೂಲಕ ಮೊದಲ ಬಾರಿಗೆ ತೆಲುಗಿಗೆ ಹೋಗಲಿದ್ದಾರೆ. ಚಿತ್ರದ ಚಿತ್ರೀಕರಣ ಇದೇ ವಾರ ಶುರುವಾಗಲಿದ್ದು, ಈ ತಂಡದಲ್ಲಿ ಸಾಕಷ್ಟು ಹೊಸಬರು ತೊಡಗಿಸಿಕೊಂಡಿರುವುದು ವಿಶೇಷ. ಇನ್ನು ಈಗಾಗಲೇ ಈ ಚಿತ್ರದಲ್ಲಿಯ ಡಾಲಿಯ ಲುಕ್‌ಗಳನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ವರ್ಮಾ.     

short by Pawan / more at Eenadu India

Comments