Skip to main content


ರಕ್ಷಿತ್ ಶೆಟ್ಟಿಯ 'ಶ್ರೀಮನ್ನಾರಾಯಣ' ಚಿತ್ರದ ಟೀಸರ್ ನೋಡಿದ್ರಾ..?

ನಟ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಅವನೇ ಶ್ರೀಮನ್ನಾರಾಯಣ ಚಿತ್ರದ ಟೀಸರ್ ರಿಲೀಸ್ ಆಗಿದೆ. ರಕ್ಷಿತ್ ಶೆಟ್ಟಿ 35ನೇ ವಸಂತಕ್ಕೆ ಕಾಲಿಟ್ಟದ್ದು, ಈ ಸಂಭ್ರಮದಲ್ಲಿ ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ಮಾಡಿದೆ. ಚಿತ್ರದ ಟೀಸರ್ ನಲ್ಲಿ ನಟ ರಕ್ಷಿತ್ ಪೊಲೀಸ್ ಅಧಿಕಾರಿಯ ಗೆಟಪ್ ನಲ್ಲಿದ್ದು, ಕಳ್ಳರ ಹಿಡಿಯಲು ಹೋಗಿ ಅವರೇ ಸಿಕ್ಕಿಬೀಳುವ ಹಾಸ್ಯಮಯ ದೃಶ್ಯವನ್ನು ತೋರಿಸಲಾಗಿದೆ. ಪರೋಡಿ ಪೊಲಿಸ್ ಲುಕ್ ನಲ್ಲಿರುವ ರಕ್ಷಿತ್ ಗೆ ಆ ಗ್ಯಾಂಗ್ ಸದಸ್ಯರು ಕೋಳ ತೊಡಿಸುತ್ತಾರೆ. ಒಟ್ಟಿನಲ್ಲಿ ಟೀಸರ್ ಚಿತ್ರದ ಬಗೆಗಿನ ಕುತೂಹಲವನ್ನು ಕೆರಳಿಸುವಂತಿದೆ.

Source: 60SecondsNow

Comments