Skip to main content


ದುಡ್ಡಿಗಾಗಿ ಪರದಾಡುತ್ತಿದ್ದಾರೆ ಸಂಜಯ್ ದತ್ ಎರಡನೇ ಪತ್ನಿ ?

ನಟಿ ಮಾಧುರಿ ದೀಕ್ಷಿತ್ ಜೊತೆಗೆ ಬ್ರೇಕ್ ಅಪ್ ಆದ ಬಳಿಕ ಸಂಜಯ್ ದತ್ ಮಾಡೆಲ್ ರೆಹಾ ಪಿಲ್ಲೈ ಸಂಜಯ್ ದತ್ ಅವರ ಜೀವನ ಪ್ರವೇಶ ಮಾಡುತ್ತಾಳೆ. 1998 ರಲ್ಲಿ ಇವರಿಬ್ಬರು ವಿವಾಹವಾಗುತ್ತಾರೆ. ಆದರೆ ಈ ವಿವಾಹ 2005 ರಲ್ಲಿ ವಿಚ್ಚೇದನದ ಮೂಲಕ ಅಂತ್ಯವಾಗುತ್ತದೆ. ಬಳಿಕ ರೇಹಾ, ಟೆನ್ನೀಸ್ ಸ್ಟಾರ್ ಪ್ಲೇಯರ್ ಲಿಯಾಂಡರ್ ಪಾಯಿಸ್ ಜೊತೆಗೆ ಲೀವಿಂಗ್ ಟು ಗೇದರ್ ಸಂಬಂಧದಲ್ಲಿರುತ್ತಾರೆ. ಇದರ ಫಲವಾಗಿ ಇವರಿಬ್ಬರಿಗೆ ಆಯಾನ್ ಎಂಬ ಹೆಸರಿನ ಮುದ್ದಾದ ಹೆಣ್ಣು ಮಗು ಜನಿಸುತ್ತದೆ. ಆದರೆ ಈ ಸಂಬಂಧವೂ ಹೆಚ್ಚು ದಿನ ಉಳಿಯಲಿಲ್ಲ. ಹೀಗಾಗಿ ಇವರಿಬ್ಬರು ಬೇರೆಯಾಗುತ್ತಾರೆ. ಆಯನ್ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದು , ಲಿಯಾಂಡರ್ ತನಗೆ ಖರ್ಚು ವೆಚ್ಚ ಬರಿಸಲು ಹಣ ನೀಡುತ್ತಿಲ್ಲ ಎಂದು ರಿಯಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಈಗಾಗಲೇ ನಾನು ಮಗಳಿಗಾಗಿ 42. 37 ಲಕ್ಷ ಖರ್ಚು ಮಾಡಿದ್ದು ಇದನ್ನು ಪೂರೈಸಬೇಕು ಹಾಗೂ 2.62 ಲಕ್ಷ ರೂಪಾಯಿಯನ್ನು ಪ್ರತಿ ತಿಂಗಳು ನನ್ನ ಹಾಗೂ ಮಗಳ ಖರ್ಚಿಗಾಗಿ ನೀಡಬೇಕು ಎಂದು ರೆಹಾ ಆಗ್ರಹಿಸಿದ್ದಾರೆ.

short by Shraman Jain / more at Balkani News

Comments