Skip to main content


ಈ ಕಾರಣಕ್ಕೆ ಸಾಲಮನ್ನಾ, ಬಜೆಟ್ ಗೆ ಮಾಜಿ ಸಿ.ಎಂ ಸಿದ್ದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ!?

ಸಿದ್ದರಾಮಯ್ಯನೆನ್ನುವ ನಾನು ಒಬ್ಬ ಇದ್ದೇನೆ, ನನ್ನ ವಿರೋಧವನ್ನು ಕಟ್ಟಿಕೊಂಡು ನೀವು ಏನಾದ್ರೂ ಸಮ್ಮಿಶ್ರ ಸರ್ಕಾರದಲ್ಲಿ ನೀವು ಹೆಚ್.ಡಿ ಕುಮಾರ ಸ್ವಾಮಿಯ ಮಾತಿನಂತೆ ನಡೆದುಕೊಳ್ಳುವುದಕ್ಕೆ ಮುಂದಾದರೆ ನನ್ನ ಬೆಂಬಲಿಗರ ಜೊತೆಗೆ ನಾನು ಏನು ಅಂತ ತೋರಿಸುವೆ ಎನ್ನುವುದನ್ನು ಕೂಡ ಹೈಕಮಾಂಡ್ ಗೆ ಸ್ಪಷ್ಟವಾಗಿ ರವಾನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇದಲ್ಲದೇ ಒಂದು ವೇಳೆ ಈ ಬಾರಿ ಏನಾದ್ರೂ ಹೆಚ್.ಡಿ ಕುಮಾರಸ್ವಾಮಿ ಬಜೆಟ್ ಮಂಡನೆ ಹಾಗೂ ರೈತರ ಸಾಲಮನ್ನದಂತಹ ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿದರೆ ತಾವು ಈ ಹಿಂದೆ ಮಾಡಿದ "ಭಾಗ್ಯ"ಗಳು ಕೊನೆಯಾಗಲಿದೆ. ಇದಲ್ಲದೇ ತಾವು ರೈತರ ಸಾಲಮನ್ನ ಘೋಷಣೆ ಕೂಡ ನಾನು ಮುಖ್ಯಮಂತ್ರಿಯಾಗಿ ಮಾಡಿದ್ದ ಕೆಲಸವು ನೀರಿನಲ್ಲಿ ಕೊಚ್ಚಿಕೊಂಡ ಹಾಗೇ ಆಗುತ್ತದೆ. ನಾನು ರಾಜ್ಯದ ಜನತೆಗೆ ನೀಡಿರುವ "ಭಾಗ್ಯ"ಗಳು ಇನಷ್ಟು ದಿವಸಗಳ ಕಾಲ ಜನರ ಮನಸ್ಸಿನಲ್ಲಿ ಇರಬೇಕು, ಇದಕ್ಕೆ ಮುಂದಿನ ಲೋಕಸಭಾ ಚುನಾವಣೆಯ ತನಕ ಸಮ್ಮಿಶ್ರ ಸರ್ಕಾರ ಬಜೆಟ್ ಮಂಡನೆ ಮಾಡಿದರೆ ಒಳ್ಳೆಯದು ಅಂತ ಹೇಳುತ್ತಿದ್ದಾರೆ ಎನ್ನಲಾಗಿದೆ.       

short by Pawan / more at Kannada News Now

Comments