Skip to main content


ಕನ್ನಡದ ಈ ಸಿನಿಮಾದಲ್ಲಿ ನಟಿಸಲಿದ್ದಾರಂತೆ ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ

ಹೌದು, ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸುತ್ತಿರುವ ಕೋಟಿಗೊಬ್ಬ-3 ಸಿನಿಮಾದಲ್ಲಿ ಇಂಟರ್‌‌‌ಪೋಲ್ ಅಧಿಕಾರಿಯಾಗಿ ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಅವರು ನಟಿಸಲಿದ್ದಾರೆ. ಈಗಾಗಲೇ ಕೊಟಿಗೊಬ್ಬ-3 ಸಿನಿಮಾದಲ್ಲಿ ಸುದೀಪ್ ಅವರ ಎದುರು ಡಾನ್‌‌‌‌-2 ಖ್ಯಾತಿಯ ಬಾಲಿವುಡ್‌‌ ನ ನವಾಬ್‌ ಶಾ ನಟಿಸುತ್ತಿದ್ದರೆ ಅವರ ಜೊತೆಗೆ ಇದೀಗ ಅಫ್ತಾಬ್ ಶಿವದಾಸನಿ ಅವರು ಕೂಡಾ ನಟಿಸುತ್ತಿದ್ದಾರೆ ಎನ್ನಲಾಗಿದೆ. ಪ್ರೇಮಂ ಖ್ಯಾತಿಯ ಮಡೋನಾ ಸೆಬಾಸ್ಟಿನ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರಲಿದೆ.      

short by Pawan / more at Webdunia

Comments