Skip to main content


ಮತ್ತೊಮ್ಮೆ ಕನ್ನಡಕ್ಕೆ ಬರ್ತಿದ್ದಾರೆ ತಮನ್ನಾ ಭಾಟಿಯಾ

ತಮನ್ನಾ ಬಾಟಿಯಾ ಮತ್ತೊಮ್ಮೆ ಕನ್ನಡಕ್ಕೆ ಬರುತ್ತಿದ್ದಾರೆ. 'ಜಾಗ್ವಾರ್' ಚಿತ್ರದ ನಂತರ ಮತ್ತೊಂದು ಅದ್ಧೂರಿ ವೆಚ್ಚದ ಚಿತ್ರದಲ್ಲಿ ತಮನ್ನಾ ಬಣ್ಣ ಹಚ್ಚುವುದು ನಿಶ್ಚಿತ. ಇದೇ ವರ್ಷ ಕನ್ನಡದ ಮತ್ತೊಂದು ಸಿನಿಮಾದಲ್ಲಿ ತಾವು ಅಭಿನಯಿಸುವುದು ಖಚಿತ ಎನ್ನುವುದನ್ನು ಅವರೇ ಹೇಳಿಕೊಂಡಿದ್ದಾರೆ. ಬಾಹುಬಾಲಿ ಖ್ಯಾತಿಯ ತಮನ್ನಾ ಈಗ ಹಿಂದಿಯ 'ಕ್ವೀನ್' ಚಿತ್ರದ ತೆಲುಗು ವರ್ಷನ್‌ಗೆ ನಾಯಕಿ. ಅದರ ಚಿತ್ರೀಕರಣಕ್ಕೀಗ ಮೈಸೂರಿಗೆ ಬಂದಿದ್ದಾರೆ.

ಮೈಸೂರಿನ ಲಲಿತ್ ಮಹಲ್ ರಸ್ತೆಯಲ್ಲಿರುವ ಕೃಷ್ಣ ಪ್ರಸಾದ್ ನಿವಾಸದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಏಕಕಾಲದಲ್ಲೇ 'ಕ್ವೀನ್' ರಿಮೇಕ್ ಕನ್ನಡದ 'ಬಟರ್‌ಫ್ಲೈ' ಸೇರಿದಂತೆ ಅದರ ತೆಲುಗು ಹಾಗೂ ತಮಿಳು ವರ್ಷನ್‌ಗೂ ಅಲ್ಲಿ ಚಿತ್ರೀಕರಣ ಸಾಗಿದೆ.

ಒಂದೇ ಸೆಟ್‌ನಲ್ಲಿ ಮೂರು ಚಿತ್ರಗಳ ಚಿತ್ರೀಕರಣ, ಅದರ ಜತೆಗೆ ಮೂರು ಸ್ಟಾರ್ ನಾಯಕಿಯರ ಸಮಾಗಮ. ನಟ, ನಿರ್ದೇಶಕ ರಮೇಶ್ ಅರವಿಂದ್ ಅಧಿಕೃತವಾಗಿ ಇದರ ಕನ್ನಡ ಮತ್ತು ತಮಿಳು ವರ್ಷನ್ ನಿರ್ದೇಶಿಸುತ್ತಿದ್ದರೂ, ಸೆಟ್‌ನಲ್ಲಿ ಮಾತ್ರ ಮೂರು ವರ್ಷನ್‌ಗೂ ಅವರೇ ಆಯಕ್ಷನ್ ಕಟ್ ಹೇಳುತ್ತಿದ್ದರು. ಚಿತ್ರೀಕರಣದ ಬಿಡುವಿನ ವೇಳೆ ಪಾರೂಲ್ ಯಾದವ್ ಹುಟ್ಟು ಹಬ್ಬ ಆಚರಿಸಿಕೊಂಡರು. ಔಪಚಾರಿಕವಾಗಿ ಮಾತಿಗೆ ಸಿಕ್ಕ ತಮನ್ನಾ ಕನ್ನಡಕ್ಕೆ ಬರುತ್ತಿರುವ ಬಗ್ಗೆ ಸುಳಿವು ನೀಡಿದರು.  

short by Pawan / more at Suvarna News

Comments