Skip to main content


ದೋಸ್ತಿ ಸರ್ಕಾರದಲ್ಲಿ ಖಾತೆಗಾಗಿ ಕಿತ್ತಾಟ: ಮಂತ್ರಿಗಿರಿ ಕಗ್ಗಂಟು ಮಧ್ಯೆ ರೈತರ ಸಾಲಮನ್ನಾ ಮರೆತರಾ ಸಿಎಂ?

ಜೆಡಿಎಸ್​ ಕಾಂಗ್ರೆಸ್​ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ, ಇಲ್ಲಿಯವರೆಗೂ ಒಂದಲ್ಲ ಒಂದು ರೀತಿಯ ಸಂಕಷ್ಟ ಎದುರಾಗುತ್ತಲ್ಲೇ ಇದೆ. ಕಾಂಗ್ರೆಸ್​ ಜೆಡಿಎಸ್​ನಲ್ಲಿ ಮಂತ್ರಿಗಿರಿ ಖಾತೆಗಳಿಗಾಗಿ ಕಿತ್ತಾಟ ನಡೆಯುತ್ತಿದ್ದು, ಒಂದೆಡ ಎಂ.ಬಿ ಪಾಟೀಲ್​ ಟೀಮ್​ ಮತ್ತೊಂದೆಡೆ ಶಾಸಕ ಸತೀಶ್​ ಜಾರಕಿಹೊಳಿ ತಂಡದಿಂದ ಬಂಡಾಯ ಮುಂದುವರೆದಿದೆ.

‘ರಾಜ್ಯದ ಎಲ್ಲಾ ರೈತರು 15 ದಿನದ ಕಾಲಾವಕಾಶ ನೀಡಿ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಲಹೆ ಪಡೆದು ಸಾಲಮನ್ನಾದ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತೇನೆ. ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುತ್ತೇನೆ. ನಂತರ ಅಂತಿಮ ಆದೇಶ ಪ್ರಕಟಿಸಲಾಗುತ್ತದೆ’ ಎಂದು ಕುಮಾರಸ್ವಾಮಿ ಹೇಳಿದ್ದರು.

ಆದರೆ, ಸದ್ಯ ಮಂತ್ರಿಮಂಡಲ ರಚನೆಯಲ್ಲಿ ಸಿಲುಕಿರುವ ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ವಿಚಾರಗಳು ಮರೆತಿದ್ದಾರೆ ಎಂದು ಚರ್ಚೆ ನಡೆಯುತ್ತಿದೆ. ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಕಾರ್ಯವು ಆರಂಭವಾಗುತ್ತಿದ್ಧಂತೆ ಬಂಡಾಯದ ಬಿಸಿಯು ತಟ್ಟಲಾರಂಭಿಸಿದೆ.     

short by Pawan / more at News18

Comments