Skip to main content


ಕೋಟಿಗೊಬ್ಬನ ಎದುರು "ಮಡ್ಡೋನ"

ಸುದೀಪ್‌ ಅಭಿನಯದ "ಕೋಟಿಗೊಬ್ಬ 3' ಚಿತ್ರದ ಮುಹೂರ್ತವಾಗಿ, ಇದೀಗ ಚಿತ್ರೀಕರಣ ಪ್ರಾರಂಭವಾಗುವುದಕ್ಕೆ ದಿನಗಣನೆ ಪ್ರಾರಂಭವಾಗಿದೆ. ಈ ಮಧ್ಯೆ ಚಿತ್ರದ ನಾಯಕಿ ಆಯ್ಕೆಯಾಗಿದ್ದು, ಸುದೀಪ್‌ ಎದುರು ಮಲಯಾಳಂ ನಟಿ, ಪ್ರೇಮ೦ ಖ್ಯಾತಿಯ ಮಡ್ಡೋನ ಸೆಬಾಸ್ಟಿಯನ್‌ ನಟಿಸುವುದು ಪಕ್ಕಾ ಆಗಿದೆ. ಹೌದು, "ಕೋಟಿಗೊಬ್ಬ 3' ಚಿತ್ರದಲ್ಲಿ ಮಡ್ಡೋನ ಸೆಬಾಸ್ಟಿಯನ್‌ ನಾಯಕಿಯಾಗಿ ನಟಿಸುತ್ತಿದ್ದು, ಇದು ಅವರ ಮೊದಲ ಕನ್ನಡ ಚಿತ್ರವಾಗಿದೆ. ಇನ್ನು ಈ ಚಿತ್ರದ ಚಿತ್ರೀಕರಣ ಇದೇ ತಿಂಗಳ 16ರಿಂದ ಪ್ರಾರಂಭವಾಗುವ ಸಾಧ್ಯತೆ ಇದೆ. ಚಿತ್ರದ ಚಿತ್ರೀಕರಣ ಯೂರೋಪ್‌ನ ಸರ್ಬಿಯಾದಲ್ಲಿ ನಡೆಯಲಿದ್ದು, ಅಲ್ಲಿ ಚಿತ್ರೀಕರಣವಾಗುತ್ತಿರುವ ಮೊದಲ ಕನ್ನಡ ಚಿತ್ರ ಇದಾಗಲಿದೆ. ಈ ಚಿತ್ರವನ್ನು ಹೊಸ ನಿರ್ದೇಶಕ ಶಿವ ಕಾರ್ತಿಕ್‌ ನಿರ್ದೇಶಿಸಿದರೆ, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು ಶೇಖರ್‌ ಚಂದ್ರ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಸುದೀಪ್‌, ಮಡ್ಡೋನ, ಅಫ್ತಾಬ್‌ ಜೊತೆಗೆ ನವಾಬ್‌ ಷಾ, ಶ್ರದ್ಧಾ ಷಾ, ರವಿಶಂಕರ್‌, ರಂಗಾಯಣ ರಘು ಮುಂತಾದವರು ನಟಿಸುತ್ತಿದ್ದಾರೆ.

short by Shraman Jain / more at Udayavani

Comments