Skip to main content


ಫಿಫಾ ವಿಶ್ವಕಪ್‌ನಲ್ಲಿ ಕನ್ನಡಿಗನ ಸೌಭಾಗ್ಯ

ಕರ್ನಾಟಕದ ಹತ್ತು ವರ್ಷದ ರಿಷಿ ತೇಜ್‌ ಮತ್ತು ತಮಿಳುನಾಡಿನ 11 ವರ್ಷದ ನಥಾನಿಯಾ ಜಾನ್‌ ಕೆ, ರಷ್ಯಾದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ನ ಮೊದಲ ಎರಡು ಪಂದ್ಯಗಳ ಅಧಿಕೃತ ಚೆಂಡನ್ನು ಹಿಡಿದು ಮುನ್ನಡೆಯುವ ಗೌರವ ಸ್ವೀಕರಿಸಲಿದ್ದಾರೆ. ಬೆಲ್ಜಿಯಂ ಮತ್ತು ಪನಾಮ ನಡುವಿನ ಪಂದ್ಯದ ಅಧಿಕೃತ ಚೆಂಡನ್ನು ಒಬ್ಬರು ಹಿಡಿದು ಮುನ್ನಡೆದರೆ, ಮತ್ತೊಬ್ಬರು ಬ್ರೆಜಿಲ್‌ ಮತ್ತು ಕೋಸ್ಟ ರಿಕಾ ನಡುವಿನ ಪಂದ್ಯದ ಅಧಿಕೃತ ಚೆಂಡನ್ನು ಹಿಡಿಯಲಿದ್ದಾರೆ. ಫಿಫಾದ ಆಟೋಮೊಟಿವ್‌ ಪಾಲುದಾರ ಕಿಯಾ ಮೋಟಾರ್ಸ್‌ ಇಂಡಿಯಾ 10ರಿಂದ 14 ವರ್ಷದೊಳಗಿನ ಭಾರತೀಯ ಫುಟ್ಬಾಲ್‌ ಆಟಗಾರರಿಗೆ ಇಂತಹ ಅದ್ಭುತ ಅವಕಾಶ ಕಲ್ಪಿಸಿದೆ.  

short by Pawan / more at Vijayakarnataka

Comments