Skip to main content


ಭೂಗತ ಪಾತಕಿ ರವಿ ಪೂಜಾರಿಯಿಂದ ಜಿಗ್ನೇಶ್​ ಬೆನ್ನಲ್ಲೇ ಉಮರ್​ ಖಾಲಿದ್​ಗೆ ಜೀವ ಬೆದರಿಕೆ..!

ಗುಜರಾತ್​ ಶಾಸಕ ಜಿಗ್ನೇಶ್ ಮೇವಾನಿ ಬೆನ್ನಲ್ಲೇ ಜೆಎನ್ಯೂ ವಿಶ್ವಾವಿದ್ಯಾಲಯ ವಿದ್ಯಾರ್ಥಿ ನಾಯಕ ಉಮರ್​ ಖಾಲಿದ್​ಗೆ ಜೀವ ಬೆದರಿಕೆ ಎನ್ನಲಾಗಿದೆ. ಈ ಸಂಬಂಧ ಉಮರ್​ ದೆಹಲಿ ವಸಂತ್​ ಕುಂಜ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ನ್ಯೂಸ್​-18 ಗೆ ಪ್ರತಿಕ್ರಿಯಿಸಿದ ಉಮರ್​, ಭೂಗತ ಪಾತಕಿ ರವಿ ಪೂಜಾರಿ ಎಂಬಾತನಿಂದ ಜೀವ ಬೆದರಿಕೆ ಬಂದಿದೆ. ಸಾರ್ವಜನಿಕ ಸ್ಥಳದಲ್ಲಿ, ಕಾರ್ಯಕ್ರಮಗಳಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡದಂತೆ ಬೆದರಿಕೆ ಹಾಕಲಾಗಿದೆ. ಜಿಗ್ನೇಶ್​ ಮೊಬೈಲ್​ಗೆ ಸಂದೇಶ ಬಂದಿದ್ದು, ನನ್ನನ್ನು ಕೊಲ್ಲುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.  
         
short by Pawan / more at News18