Skip to main content


ಪತ್ನಿಗೆ ಗಡ್ಡ ಬೆಳೆಯುತ್ತಿದೆ ಎಂದು ಕೋರ್ಟ್ ಮೆಟ್ಟಿಲೇರಿದ ಪತಿ, ಮುಂದೇನಾಯ್ತು?

ಪತ್ನಿಗೆ ಗಡ್ಡ ಬೆಳೆಯುತ್ತಿದೆ ಎಂದು ಆರೋಪಿಸಿದ ಪತಿಯೊಬ್ಬ ವಿಚ್ಛೇದನ ಬೇಕೆಂದು ಕೋರ್ಟ್ ಮೆಟ್ಟಿಲೇರಿದ ವಿಚಿತ್ರ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ. ಮದುವೆಗೆ ಮೊದಲು ನಾನು ಆಕೆಯನ್ನು ನೋಡಿರಲಿಲ್ಲ. ಮೊದಲ ಬಾರಿ ಆಕೆಯನ್ನು ನೋಡಲು ಹೋದಾಗ ದುಪಟ್ಟಾದಿಂದ ಮುಖವನ್ನು ಮುಚ್ಚಿಕೊಂಡಿದ್ದಳು. ಸಂಪ್ರದಾಯದ ನೆಪದಲ್ಲಿ ಮಗಳ ಮುಖ ತೋರಿಸಲು ಆಕೆಯ ತಂದೆ- ತಾಯಿ ಒಪ್ಪಲಿಲ್ಲ. ಸ್ವಲ್ಪ ದಿನದಲ್ಲೇ ನಡೆದು ಹೋದ ನಿಶ್ಚಿತಾರ್ಥ ಮತ್ತು ಮದುವೆಯಲ್ಲೂ ಸಹ ಆಕೆಯ ಮುಖವನ್ನು ನೋಡುವ ಅವಕಾಶ ನೀಡಲಿಲ್ಲ.

ನಾನು ಮೊದಲ ಬಾರಿಗೆ ಆಕೆಯ ಮುಖ ನೋಡಿದಾಗ ಕ್ಲೀನ್ ಶೇವ್ ಮತ್ತು ಮೇಕ್- ಅಪ್ ಮಾಡಿಕೊಂಡಿದ್ದಳು. ಮದುವೆಯ ಬಳಿಕ 7 ದಿನ ಆಕೆಯ ಜತೆ ಕಳೆದ ನಾನು ಬಳಿಕ ಕೆಲಸದ ನಿಮಿತ್ತ ನಾನು ಬೇರೆ ಊರಿಗೆ ಹೋದೆ. ಹೀಗಾಗಿ ಪತ್ನಿಗೆ ಗಡ್ಡ ಬೆಳೆಯುವುದು ನನ್ನ ಗಮನಕ್ಕೆ ಬರಲಿಲ್ಲ ಎಂದು, ಪತಿರಾಯ ವಿಚ್ಛೇದನದ ದೂರಿನಲ್ಲಿ ತಿಳಿಸಿದ್ದ. ಹಿಂತಿರುಗಿದ ನಾನು 15 ದಿನ ಅವಳ ಜತೆ ಕಳೆದಾಗ ಆಕೆಯ ಮುಖದಲ್ಲಿ ಗಡ್ಡ ಬೆಳೆಯುತ್ತಿರುವುದು ಬೆಳಕಿಗೆ ಬಂದಿದ್ದು, ಆಕೆ ಪುರುಷನಂತೆ ಕಾಣುತ್ತಿದ್ದಳು, ಎಂದಾತ ಹೇಳಿದ್ದಾನೆ.   

short by Pawan / more at Vijayakarnataka

Comments