Skip to main content


ಕಮ್​ಬ್ಯಾಕ್​ ಕಾತರದಲ್ಲಿ ಅಮೂಲ್ಯ

‘ಮಾಸ್ತಿಗುಡಿ’ ಬಳಿಕ ನಟಿ ಅಮೂಲ್ಯ ತೆರೆಮೇಲೆ ಕಾಣಿಸದೆ ಬರೋಬ್ಬರಿ ವರ್ಷದ ಮೇಲಾಯಿತು. ಈವರೆಗೂ ಅವರ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಲಭ್ಯವಾಗಿರಲಿಲ್ಲ. ಒಂದರ್ಥದಲ್ಲಿ ಸಿನಿಮಾ ಕ್ಷೇತ್ರದಿಂದ ಹಿಂದೆ ಸರಿದರಾ ಎಂಬ ಮಾತುಗಳೇ ಕೇಳಿಬರುತ್ತಿದ್ದವು. ಇದೀಗ ಆ ಎಲ್ಲ ಪ್ರಶ್ನೆಗಳಿಗೆ ಖುದ್ದು ಅಮೂಲ್ಯ ಉತ್ತರ ನೀಡಿದ್ದಾರೆ. ‘ಸಿನಿಮಾನೇ ನನ್ನ ಜೀವ. ಅದರಿಂದಲೇ ನಾನು ಈ ಹಂತಕ್ಕೆ ಬಂದಿದ್ದು, ನಾನಿರುವವರೆಗೂ ಸಿನಿಮಾ ಕ್ಷೇತ್ರದಲ್ಲಿಯೇ ಮುಂದುವರಿಯುತ್ತೇನೆ’ ಎಂದು ಹೇಳಿಕೊಂಡಿರುವ ಅಮೂಲ್ಯ, ಈಗ ಕಮ್್ಯಾಕ್ ಮಾಡುವ ಕಾತರದಲ್ಲಿದ್ದಾರೆ.

ಮದುವೆ ಆದ ಬಳಿಕ ಕೆಲವು ತಿಂಗಳಿಂದ ಚುನಾವಣಾ ಕೆಲಸಗಳಲ್ಲೂ ಸಕ್ರಿಯರಾಗಿದ್ದ ಅಮೂಲ್ಯ, ಸದ್ಯ ಸಿನಿಮಾಗಳತ್ತ ದೃಷ್ಟಿ ಹಾಯಿಸಿದ್ದಾರೆ. ‘ಕಳೆದ ಆರು ತಿಂಗಳ ಹಿಂದೆಯೇ ಎರಡು ಸಿನಿಮಾ ಕಥೆ ಕೇಳಿದ್ದೆ. ಜಗದೀಶ್ ಅವರಿಗೂ ಕಥೆ ಇಂಟ್ರೆಸ್ಟಿಂಗ್ ಅನಿಸಿತ್ತು. ಚುನಾವಣೆ ಮುಗಿದ ಮೇಲೆ ಆ ಚಿತ್ರಗಳ ಬಗ್ಗೆ ತಿಳಿಸುತ್ತೇನೆ ಎಂದಿದ್ದೆ. ಇದೀಗ ಎಲೆಕ್ಷನ್ ಮುಗಿದಿದೆ. ಅದೇ ಸಿನಿಮಾ ಒಪ್ಪಿಕೊಳ್ಳಬಹುದು ಅಥವಾ ಬೇರೆಯದನ್ನೂ ಆಯ್ದುಕೊಳ್ಳಬಹುದು’ ಎಂದು ಮಾಹಿತಿ ನೀಡುತ್ತಾರೆ.  

short by Pawan / more at Vijayavani

Comments