Skip to main content


ಶ್ರೀರಾಮ ನಡೆದ ಜಾಗದಲ್ಲಿ ನಡೆವ ಭಾಗ್ಯ ಕಲ್ಪಿಸಿದ ಕೇಂದ್ರ ಸರ್ಕಾರ

ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳಲ್ಲಿ 'ಸ್ವದೇಶ ದರ್ಶನ' ಸಹ ಒಂದು. ಈ ಯೋಜನೆಯ ಮೂಲಕ 13 ಪ್ರವಾಸೋದ್ಯಮ ಸರ್ಕ್ಯೂಟ್ ಗಳನ್ನು ಪ್ರವಾಸೋದ್ಯಮ ಇಲಾಖೆ ನಿರ್ಮಿಸಿದೆ. ಇವುಗಳಲ್ಲಿ ರಾಮಾಯಣ ಸರ್ಕ್ಯೂಟ್ ಸಹ ಒಂದು. ಅಂದರೆ ರಾಮ ನಡೆದಾಡಿದ ದೇಶದ ವಿವಿಧ ಭಾಗಗಳನ್ನು ಗುರುತಿಸಿ, ಆ ತಾಣದ ಪ್ರವಾಸೋದ್ಯಮ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುವುದು. ಮತ್ತು ಹೆಚ್ಚು ಹೆಚ್ಚು ಪ್ರವಾಸಿಗಳು ಅಲ್ಲಿಗೆ ಆಗಮಿಸುವಂತೆ ಮಾಡುವುದು. ಇದು ಧಾರ್ಮಿಕ ಪ್ರವಾಸೋದ್ಯಮದ ಭಾಗವಾಗಿದೆ.

ಈ ಸರ್ಕ್ಯೂಟ್ ಅಡಿಯಲ್ಲಿ ಕರ್ನಾಟಕದ ಹಂಪಿಯೂ ಇರುವುದು ವಿಶೇಷ. ಇನ್ನುಳಿದಂತೆ ಉತ್ತರ ಪ್ರದೇಶದ ಅಯೋಧ್ಯಾಮ ಶೃಂಗ್ವೇರ್ಪುರ, ಚಿತ್ರಕೂಟ, ಬಿಹಾರದ ಸೀತಾಮರ್ಹಿ, ಬುಕ್ಸಾರ್ ಮತ್ತು ದರ್ಭಾಂಗ, ಮಧ್ಯಪ್ರದೇಶದ ಚಿತ್ರಕೂಟ, ಪಶ್ಚಿಮಬಂಗಾಳದ ನಂದಿಗ್ರಾಮ, ಒಡಿಶಾದ ಮಹೇಂದ್ರಗಿರಿ, ಛತ್ತೀಸ್ಗಢದ ಜಗ್ದಲ್ಪುರ, ತೆಲಂಗಾಣದ ಭದ್ರಾಂಚಲಂ, ತಮಿಳುನಾಡಿನ ರಾಮೇಶ್ವರಂ ಮತ್ತು ಮಹಾರಾಷ್ಟ್ರದ ನಾಸಿಕ್ ಮತ್ತು ಮಹಾರಾಷ್ಟ್ರ ಗಳು ಈ ಸರ್ಕ್ಯೂಟ್ ಅಡಿಯಲ್ಲಿ ಬರುತ್ತವೆ.   

short by Pawan / more at Oneindia

Comments