Skip to main content


ಸಂಭಾವನೆ ಹೆಚ್ಚಿಸಿಕೊಂಡ ದೀಪಿಕಾ ಪಡುಕೋಣೆ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರ ತೆರೆಕಂಡು 300 ಕೋಟಿ ರೂ. ಕ್ಲಬ್ ಸೇರಿತ್ತು. ಚಿತ್ರದಲ್ಲಿ ರಾಣಿ ಪದ್ಮಾವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ ಪಡುಕೋಣೆ ನಟನೆಗೆ ಮೆಚ್ಚುಗೆ ಕೇಳಿ ಬಂದಿತ್ತು. ಈ ಚಿತ್ರದ ನಂತರದಲ್ಲಿ ದೀಪಿಕಾ ಖ್ಯಾತಿ ಹೆಚ್ಚಿದ್ದು, ಅದಕ್ಕೆ ತಕ್ಕಂತೆ ಅವರು ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರೆ. ಇದರಿಂದ ಅನೇಕ ನಿರ್ವಪಕರು ಬನ್ಸಾಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರಂತೆ.

ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಾಯಕನಿಗೆ ಹೆಚ್ಚು ಸಂಭಾವನೆ ನೀಡಲಾಗುತ್ತದೆ. ಈಗ ದೀಪಿಕಾ ಕೂಡ ನಾಯಕನಿಗೆ ಸಿಗುವಷ್ಟೇ ಸಂಭಾವನೆ ಬೇಕು ಎಂಬ ಬೇಡಿಕೆ ಇಡುತ್ತಿದ್ದಾರಂತೆ. ಹಾಗಾಗಿ ತಮ್ಮ ಸಿನಿಮಾಗಳಿಗೆ ದೀಪಿಕಾರನ್ನು ಆಯ್ಕೆ ಮಾಡಬೇಕು ಎಂದುಕೊಂಡ ಅನೇಕ ನಿರ್ವಪಕರು ಈಗ ಬೇರೆ ನಟಿಯರ ಹುಡುಕಾಟದಲ್ಲಿ ತೊಡಗಿದ್ದಾರೆ. ‘ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರ ತೆರೆಕಂಡ ನಂತರದಲ್ಲಿ ದೀಪಿಕಾ ಕೈಗೆ ಸಿಗುತ್ತಿಲ್ಲ. ಅವರು ಈಗ ಇಂಡಸ್ಟ್ರಿಯ ಟಾಪ್ ನಿರ್ವಪಕರು ಹಾಗೂ ನಿರ್ದೇಶಕರ ಜತೆ ಮಾತ್ರ ಕೆಲಸ ಮಾಡಲು ಒಪ್ಪಿಕೊಳ್ಳುತ್ತಿದ್ದಾರೆ. ಅವರು ಚಿಕ್ಕ-ಪುಟ್ಟ ನಿರ್ವಪಕರ ಜತೆ ಕೈಜೋಡಿಸಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಬನ್ಸಾಲಿ ನೇರ ಹೊಣೆ’ ಎಂದು ಕೆಲ ನಿರ್ವಪಕರು ದೂರಿದ್ದಾರಂತೆ.    

short by Pawan / more at Vijayavani

Comments