Skip to main content


ಫುಟ್ಬಾಲ್‌ ಫೈನಲ್‌: ಮೆಸ್ಸಿ ದಾಖಲೆ ಸರಿಗಟ್ಟಿದ ಸುನೀಲ್‌ ಚೆಟ್ರಿ!

ಹೌದು, ಈಗಾಗಲೇ ಇಂಟರ್‌ಕಾಂಟಿನೆಂಟಲ್‌ ಕಪ್‌ ಫ‌ುಟ್‌ಬಾಲ್‌ ಫೈನಲ್‌ ಪಂದ್ಯ `ಮುಂಬೈ ಫ‌ುಟ್‌ಬಾಲ್‌ ಅರೆನಾ'ದಲ್ಲಿ ಆರಂಭಗೊಂಡಿದೆ. ಭಾರತ-ಕೀನ್ಯಾ ನಡುವಿನ ಕಾದಾಟ ಶುರುವಾಗಿದ್ದು, ಪಂದ್ಯದ ಅರ್ಧ ಸಮಯ ಮುಗಿದಿದೆ. ನಾಯಕ ಸುನೀಲ್‌ ನೇತೃತ್ವದ ಭಾರತ ಪುರುಷರ ಪುಟ್ಬಾಲ್‌ ತಂಡ ಪಂದ್ಯದಲ್ಲಿ 2-0 ಗೋಲ್‌ಗಳನ್ನು ಬಾರಿಸಿ ಮುನ್ನಡೆ ಸಾಧಿಸಿದೆ. ಇನ್ನು ಅರ್ಧದಷ್ಟು ಪಂದ್ಯ ಬಾಕಿಯಿದ್ದು, ಭಾರತ ತಂಡ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದೆ. 

ಇನ್ನು ಸುನೀಲ್‌ ಚೆಟ್ರಿ ಈ ಪಂದ್ಯದಲ್ಲಿ ಗೋಲ್‌ ಗಳಿಸುವ ಮೂಲಕ ಅರ್ಜಂಟೇನಿಯಾ ಆಟಗಾರ ಲಿಯೋನಲ್‌ ಮೆಸ್ಸಿ ರೆಕಾರ್ಡ್‌ನ್ನು ಸರಿಗಟ್ಟಿದ್ದಾರೆ. ಲಿಯೋನಲ್‌ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್‌ ಆಟದಲ್ಲಿ ಈಗಾಗಲೇ 64 ಗೋಲ್‌ಗಳನ್ನು ಬಾರಿಸಿದ್ದಾರೆ. ಇಂದು ನಡೆದ ಪಂದ್ಯದಲ್ಲಿ ಭಾರತ ಫುಟ್ಬಾಲ್‌ ತಂಡದ ನಾಯಕ ಸುನೀಲ್‌ ಚೆಟ್ರಿ ಎರಡು ಗೋಲ್‌ಗಳನ್ನು ಬಾರಿಸುವ ಮೂಲಕ ಲಿಯೋ ಮೆಸ್ಸಿ ರೆಕಾರ್ಡ್‌ನ್ನು ಸರಿಗಟ್ಟಿ ಮುನ್ನುಗ್ಗುತ್ತಿದ್ದಾರೆ.     

short by Pawan / more at Eenadu India

Comments