Skip to main content


ನಿರೂಪ್ ಭಂಡಾರಿಗೆ ರಾಧಿಕಾ ಪಂಡಿತ್ ನಾಯಕಿ!

ರಾಕಿಂಗ್ ಸ್ಟಾರ್ ಯಶ್ ಅವರನ್ನು ಮದುವೆಯಾದ ಬಳಿಕ ಮರೆಯಾದಂತಿದ್ದ ಮೊಗ್ಗಿನ ಮನಸಿನ ಹುಡುಗಿ ಮತ್ತೆ ಬಂದಿದ್ದಾರೆ. ಮದುವೆಯ ಬಳಿಕ ಚಿತ್ರ ರಂಗದಿಂದ ಸಂಪೂರ್ಣವಾಗಿ ದೂರವಾದಂತಿದ್ದ ರಾಧಿಕಾ ಪಂಡಿತ್ ಮತ್ತೆ ನಾಯಕಿಯಾಗಿ ಮರಳಿದ್ದಾರೆ. ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿಗೆ ರಾಧಿಕಾ ನಾಯಕಿಯಾಗಲಿದ್ದಾರೆಂಬುದು ಲೇಟೆಸ್ಟ್ ಸುದ್ದಿ!

ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಒಟ್ಟಾಗಿ ನಟಿಸಲಿರುವ ಈ ಚಿತ್ರಕ್ಕೆ ಇನ್ನೂ ಹೆಸರು ಫಿಕ್ಸಾಗಿಲ್ಲ. ಆದರೆ ಈ ಚಿತ್ರವನ್ನು ಪ್ರಿಯಾ ವಿ ನಿರ್ದೇಶನ ಮಾಡಲಿದ್ದಾರೆಂಬ ವಿಚಾರ ಮಾತ್ರ ಜಾಹೀರಾಗಿದೆ. ಇದೀಗ ಈ ಚಿತ್ರಕ್ಕೆ ಸಕಲ ತಯಾರಿಗಳೂ ಭರದಿಂದ ಸಾಗುತ್ತಿವೆ. ಇನ್ನೇನು ತಿಂಗಳ ಅಂತರದಲ್ಲಿಯೇ ಚಿತ್ರೀಕರಣ ಶುರು ಮಾಡಲಿರೋ ಈ ಚಿತ್ರವನ್ನು ಈ ವರ್ಷದ ಕಡೆಯ ಹೊತ್ತಿಗೆ ತೆರೆ ಕಾಣಿಸುವ ಗುರಿಯೂ ಚಿತ್ರ ತಂಡಕ್ಕಿದೆ.   

short by Pawan / more at Public Tv

Comments