Skip to main content


ಅಖಾಡಕ್ಕೆ ಸಿದ್ದರಾಮಯ್ಯ ಎಂಟ್ರಿ; ಇನ್ಮುಂದೆ ಶುರುವಾಗುತ್ತಾ ಹೊಸ ಗೇಮ್?

ಎಂಥೆಂಥ ಸಂದರ್ಭಗಳಲ್ಲೇ ಫೀನಿಕ್ಸ್​ನಂತೆ ಕಂಬ್ಯಾಕ್ ಮಾಡಿ ಎಲ್ಲರಿಗೂ ಅಚ್ಚರಿ ಹುಟ್ಟಿಸಿದ್ದ ಸಿದ್ದರಾಮಯ್ಯನವರ ಮುಂದೆ ಈಗ ಮತ್ತೊಂದು ಸಂಕಷ್ಟದ ಪರಿಸ್ಥಿತಿ ಇದೆ. ಸಿದ್ದರಾಮಯ್ಯನವರ ಆಪ್ತರಲ್ಲಿ ಬಹುತೇಕರನ್ನು ಸರಕಾರದ ರಚನೆಯಲ್ಲಿ ಮೂಲೆಗುಂಪು ಮಾಡಲಾಗಿದೆ. ಹೆಚ್​ಡಿಕೆ ಸಿಎಂ, ಪರಮೇಶ್ವರ್ ಡಿಸಿಎಂ ಆಗಿರುವಾಗ ಸಿದ್ದರಾಮಯ್ಯ ರಾಜಕೀಯ ವೃತ್ತಿ ಮುಗಿದೇ ಹೋಯಿತು ಎಂದು ವಿರೋಧಿಗಳು ಖುಷಿಪಡುತ್ತಿದ್ದಾರೆ.

ಆಪ್ತ ಅಧಿಕಾರಿಯ ಟ್ರಾನ್ಸ್​ಫರ್ ಸೇರಿದಂತೆ ಸಿದ್ದರಾಮಯ್ಯನವರ ಬಲ ಕುಂದಿಸುವ ಪ್ರಯತ್ನಗಳು ನಡೆಯುತ್ತಿವೆ, ಮುಂದೆಯೂ ನಡೆಯಲಿವೆ ಎಂಬ ಮಾತಂತೂ ಕೇಳಿಬರುತ್ತಿದೆ. ಇಂತಹ ಸಂದರ್ಭದಲ್ಲೇ ಕಾಂಗ್ರೆಸ್ ರಾಜಕಾರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ಖಾತೆ ಹಂಚಿಕೆಯಿಂದುಟಾಗಿರುವ ಭಿನ್ನಮತವನ್ನ ಶಮನ ಮಾಡಲು ಜಿ. ಪರಮೇಶ್ವರ್ ಅವರಿಂದ ಸಾಧ್ಯವಾಗುತ್ತಿಲ್ಲ. ಎಂಬಿ ಪಾಟೀಲ್ ನೇತೃತ್ವದಲ್ಲಿ ಅತೃಪ್ತರು ಒಗ್ಗೂಡಿ ಬಂಡಾಯ ಏಳುವ ಸೂಚನೆ ರವಾನಿಸಿದ್ದಾರೆ.

ಸಿದ್ದರಾಮಯ್ಯ ಮುನ್ನಲೆಯಲ್ಲಿರುತ್ತಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿರುವಂತೆಯೇ, ಹೈಕಮಾಂಡ್​ಗೂ ಈ ಸಂದೇಶಗಳು ರವಾನೆಯಾಗಿರುವಂತಿವೆ. ನ್ಯೂಸ್18 ಕನ್ನಡಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ ನಿನ್ನೆ ರಾತ್ರಿಯೇ ಹೈಕಮಾಂಡ್ ಸಿದ್ದರಾಮಯ್ಯಗೆ ಕರೆ ಮಾಡಿ ಕೂಡಲೇ ಬೆಂಗಳೂರಿಗೆ ಹೋಗಿ ಪರಿಸ್ಥಿತಿ ನಿಭಾಯಿಸುವಂತೆ ಸೂಚನೆ ಕೊಟ್ಟಿದೆ ಎನ್ನಲಾಗಿದೆ.   

short by Pawan / more at News18

Comments