Skip to main content


ಓಲಾ, ಉಬರ್ ಮುಕ್ತ ರಾಜ್ಯಕ್ಕೆ ಸಿ.ಎಂಗೆ ಒತ್ತಾಯ

ಮುಖ್ಯಮಂತ್ರಿ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಚಾಲಕರು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಕುಮಾರಸ್ವಾಮಿ, 'ಈ ಹಿಂದೆ ಚಾಲಕರು ನಿರಂತರವಾಗಿ ಪ್ರತಿಭಟನೆ ಮಾಡಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಅವರಿಗೆ ಅಂಥ ಸ್ಥಿತಿಗೆ ತರಬೇಡಿ. ಅವರ ಸಮಸ್ಯೆಗಳನ್ನು ಬಗೆಹರಿಸಲು ಸಮಿತಿಯಲ್ಲಿರುವ ಅಧಿಕಾರಿಗಳು ಶ್ರಮಿಸಿ' ಎಂದರು. ಮೊಬೈಲ್ ಆಯಪ್‌ ಆಧರಿತ ಕ್ಯಾಬ್ ಕಂಪನಿಗಳಾದ ಓಲಾ ಹಾಗೂ ಉಬರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಚಾಲಕರು, 'ಇಲ್ಲಿಯ ಚಾಲಕರಿಗೆ ಸರ್ಕಾರವೇ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು' ಎಂದರು. 'ದರ ನಿಗದಿ ವೇಳೆ ಓಲಾ ಹಾಗೂ ಉಬರ್ ಕಂಪನಿಗಳ ಪ್ರತಿನಿಧಿಗಳ ಅಭಿಪ್ರಾಯವನ್ನಷ್ಟೇ ಪಡೆಯಲಾಗಿದೆ. ಇದರಿಂದ ನಮಗೆಲ್ಲ ಅನ್ಯಾಯವಾಗಿದೆ' ಎಂದರು. ಸಮಸ್ಯೆ ಆಲಿಸಿದ ಕುಮಾರಸ್ವಾಮಿ, 'ನಿಮ್ಮ ಜತೆಗೆ ನಾನಿದ್ದೇನೆ. ಕೆಲವೇ ದಿನಗಳಲ್ಲಿ ಕ್ರಮ ಕೈಗೊಳ್ಳಲಿದ್ದೇನೆ' ಎಂದು ಭರವಸೆ ನೀಡಿದರು.

Comments