Skip to main content


ರಾಮಾ ರಾಮಾ ರೇ ನಿರ್ದೇಶಕನ ಒಂದಲ್ಲಾ ಎರಡಲ್ಲಾ ಪೋಸ್ಟರ್ ರಿಲೀಸ್

'ರಾಮಾ ರಾಮಾ ರೇ' ಚಿತ್ರದ ನಿರ್ದೇಶಕ ಡಿ ಸತ್ಯ ಪ್ರಕಾಶ್ ಮತ್ತು 'ಹೆಬ್ಬುಲಿ' ಖ್ಯಾತಿಯ ನಿರ್ಮಾಪಕ ಉಮಾಪತಿ ಗೌಡ ಒಟ್ಟಿಗೆ ಸೇರಿ 'ಒಂದಲ್ಲಾ ಎರಡಲ್ಲಾ' ಎಂಬ ಹೊಸ ಚಿತ್ರವನ್ನ ನಿರ್ಮಾಣ ಮಾಡುತ್ತಿರುವುದು ಗೊತ್ತಿರುವ ಸಂಗತಿ.

ಈ ಚಿತ್ರದ ಚಿತ್ರೀಕರಣ ಈಗ ಬಹುತೇಕ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿರುವ ಚಿತ್ರತಂಡ ಸದ್ಯದಲ್ಲೇ ತೆರೆ ಮೇಲೆ ಬರಲು ಸಜ್ಜಾಗುತ್ತಿದೆ. ಈ ಮಧ್ಯೆ ಒಂದಲ್ಲಾ ಎರಡಲ್ಲಾ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ತುಂಬಾ ವಿಶೇಷವಾಗಿದೆ.

ಮಂಗಳೂರಿನಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ನಿರ್ದೇಶಕ ಸತ್ಯ ಪ್ರಕಾಶ್ ಅವರು ಹೇಳುವ ಪ್ರಕಾರ ಈ ಚಿತ್ರವೂ ''ಮುಗ್ದ ಮನಸ್ಸಿನವರಿಗೆ ಇಷ್ಟವಾಗುತ್ತದೆ ಅಥವಾ ಈ ಚಿತ್ರ ನೋಡಿದಮೇಲೆ ಮುಗದ ಮನಸ್ಸಿನವರಾಗುತ್ತಾರೆ' ಎನ್ನುತ್ತಾರೆ.   

short by Pawan / more at Filmibeat

Comments