Skip to main content


ನನಗೆ ಕಿರುಕುಳ ನೀಡುತ್ತಿದ್ದಾರೆ: ಡಿ.ಕೆ. ಶಿವಕುಮಾರ್‌

‘ನನಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ. ನನ್ನ ಸಂಬಂಧಿಕರು, ಆಪ್ತರಿಗೂ ಕಿರುಕುಳ ಕೊಡುತ್ತಿದ್ದಾರೆ. ಯಾಕೆ ಇದೆಲ್ಲವನ್ನು ಮಾಡುತ್ತಿದ್ದಾರೆ ಎಂಂಬುದು ಗೊತ್ತಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಆದಾಯ ತೆರಿಗೆ ಇಲಾಖೆ ನೋಟಿಸ್‌ ಸಂಬಂಧ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ‘ಈಗ ವಿಚಾರಣೆಗೆ ಹಾಜರಾಗಿ ಅಂತ ನೊಟೀಸ್ ಬಂದಿದೆ. ಆದರೆ ಯಾವುದೇ ಸಮನ್ಸ್ ಬಂದಿಲ್ಲ. ನಿಮಗೆ ಏನು ಅನಿಸುತ್ತದೋ ಅದನ್ನ ಮಾಡಿ. ಅವರಿಗೆ ಏನು ಅನ್ನಿಸ್ತದೋ ಅವರು ಮಾಡ್ತಾರೆ. ಕೊನೆಗೆ, ದೇಶ, ಕಾನೂನು, ನ್ಯಾಯ ಎಲ್ಲವೂ ಇದೆ. ಕಾನೂನು ಮೂಲಕ ಹೋರಾಟ ಮಾಡೋದು ಗೊತ್ತಿದೆ’ ಎಂದರು.  

short by Pawan / more at Prajavani

Comments