Skip to main content


ಮತ್ತೆ ಅಪ್ಪು ಸಿನಿಮಾಗಾಗಿ ಬಂದ್ರು ಜಾನಿ ಮಾಸ್ಟರ್

ಹೌದು.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಸಿನಿಮಾದ ಹಾಡಿನ ಚಿತ್ರೀಕರಣಕ್ಕಾಗಿ ಜಾನಿ ಮಾಸ್ಟರ್ ಮತ್ತೆ ಸ್ಯಾಂಡಲ್ ವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ 'ನಟಸಾರ್ವಭೌಮ' ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು ಹಾಡಿಗೆ ಜಾನಿ ಮಾಸ್ಟರ್ ಕೊರಿಯೋಗ್ರಾಫ್ ಮಾಡುತ್ತಿದ್ದಾರೆ.

ಪವರ್ ಸ್ಟಾರ್ ಹಾಗೂ ಜಾನಿ ಮಾಸ್ಟರ್ ಒಂದಾಗಿದ್ದಾರೆ ಎನ್ನುವುದನ್ನು ತಿಳಿದ ತಕ್ಷಣ ಅಭಿಮಾನಿಗಳು ಈಗಾಗಲೇ ಹಾಡು ಮತ್ತು ಡ್ಯಾನ್ಸ್ ಹೇಗಿರಲಿದೆ ಎನ್ನುವ ಲೆಕ್ಕಾಚಾರ ಹಾಕುತ್ತಿದ್ದಾರೆ. ನಟ ಸಾರ್ವಭೌಮ ಸಿನಿಮಾವನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದು ರಾಕ್ ಲೈನ್ ಪ್ರೊಡಕ್ಷನ್ಸ್ ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.     

short by Pawan / more at Filmibeat

Comments