Skip to main content


ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಕ್ಸ್‌ಕ್ಯೂಸ್ ಮಿ ಸುನೀಲ್

'ಎಕ್ಸ್‌ಕ್ಯೂಸ್ ಮಿ' ಸಿನಿಮಾ ನಾಯಕ ಹಾಗೂ ಗಾಯಕ ಸುನೀಲ್ ರಾವ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತನ್ನ ಪ್ರೇಯಸಿ ಶ್ರೇಯಾ ಐಯ್ಯರ್ ಅವರ ಜೊತೆ ಸುನೀಲ್ ವಿವಾಹ ನಡೆದಿದೆ.

ಸುನೀಲ್ ರಾವ್ ಮದುವೆ ಆಗಿರುವ ಶ್ರೇಯಾ ಐಯ್ಯರ್ ವೃತ್ತಿಯಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ. ಸುನೀಲ್ ಅಭಿನಯದ ವೆಬ್ ಸೀರಿಸ್ ಗೆ ಡಿಸೈನರ್ ಆಗಿ ಕೆಲಸ ಮಾಡಿದ್ದು ಸದ್ಯ 'ಟಕ್ಕರ್' ಚಿತ್ರಕ್ಕೂ ಇವರೇ ವಸ್ತ್ರ ವಿನ್ಯಾಸಕಿ.

ಶ್ರೇಯಾ ಐಯ್ಯರ್ ಹಾಗೂ ಸುನೀಲ್ ರಾವ್ ಅವರಿಗೆ ವೆಬ್ ಸೀರಿಸ್ ಚಿತ್ರೀಕರಣದ ಸಮಯದಲ್ಲಿ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಈಗ ಇಬ್ಬರು ಮನೆಯವರ ಒಪ್ಪಿಗೆಯಿಂದ ದಂಪತಿಗಳಾಗುತ್ತಿದ್ದಾರೆ.    

short by Pawan / more at Filmibeat

Comments