Skip to main content


ಲೂಸ್ ಮಾದ ಯೋಗಿ ತಂದೆಯ ವಂಚನೆ ಪುರಾಣ ಬೆಳಕಿಗೆ!?

ಖಾಲಿ ಪೋಲಿ ಫಿಲ್ಮ್ ಮಾಡ್ಕೊಂಡಿದ್ದ ಸಿದ್ದರಾಜು ಅವರಿಗೆ ಯಾವಾಗ ದುನಿಯಾ ಫಿಲ್ಮ್ ಕೈ ಹಿಡಿತೋ ಅವತ್ತಿಂದ ಖದರ್ರೇ ಚೇಂಜ್ ಆಗಿ ಹೋಯ್ತು. ದುನಿಯಾ ಫಿಲ್ಮ್ ನಲ್ಲಿ ವಿಲನ್ ಆಗಿದ್ದ ಮಗ ಲೂಸಾ ಮಾದ ಅಲಿಯಾಸ್ ಯೋಗಿಶ್ ಯಾವಾಗ ಹೀರೋ ಆದ್ರೋ ಅವರ ಅದೃಷ್ಟ ಡಬಲ್ ಆಗಿ ಹೋಯ್ತು. ಮಗ ಹೀರೋ ಆಗ್ತಿದ್ದಂಗೆ ಅಪ್ಪ ಸಿದ್ದರಾಜುನೇ ಕಾಲ್ ಶೀಟ್ ಕೊಡೋದ್ರಿಂದ ಹಿಡ್ದು ಮಗ ಯಾವ ಫಿಲ್ಮ್ ಮಾಡ್ಬೇಕು ಅಂತಾ ಡಿಸೈಡ್ ಮಾಡ್ತಿದ್ರು. ಹೀಗೆ, ಮರಿಸ್ವಾಮಿ ಅನ್ನೋ ಸಣ್ಣ ಪ್ರಡ್ಡ್ಯುಸರ್ ಒಬ್ಬರು, ಮಂಡ್ಯದ ಫೇಮಸ್ ರೌಡಿ ಜಡೇಜಾ ರವಿ ಮೇಲೊಂದು ಫಿಲ್ಮ್ ಮಾಡಲು ನಿರ್ಧರಿಸಿ,  ಚಿತ್ರಕ್ಕೆ ಲೂಸ್ ಮಾದನನ್ನಾ ಹೀರೋ ಮಾಡ್ಬೇಕು ಅಂತಾ ಕಾಲ್ ಶೀಟ್ ಗೋಸ್ಕರ ಅಪ್ಪ ಸಿದ್ದರಾಜನನ್ನಾ ಮೀಟ್ ಮಾಡಿದ್ರು. 5 ಲಕ್ಷ ಅಡ್ವಾನ್ಸ್ ಈಸ್ಕೊಂಡು, ನಂತರ ಚಿತ್ರಕ್ಕೆ ಮಗನ ಕಾಲ್ ಶೀಟ್ ನೀಡದೆ ಸತತ 5 ವರ್ಷದಿಂದ ಮರಿಸ್ವಾಮಿಗೆ ಸತಾಯಿಸುತ್ತಿದ್ದಾರೆ ಸಿದ್ದರಾಜು. ಇದೀಗ ಹಣ ಇಲ್ಲದೆ ಒದ್ದಾಡುತ್ತಿರೋ ಮರಿಸ್ವಾಮಿ, ಲಕ್ವ ಹೊಡ್ದು ಲ್ಯಾಪ್ಸ್ ಆಗಿ ವಿಕ್ಟೊರಿಯಾ ಆಸ್ಪತ್ರೆಯ ಜನರಲ್ ವಾರ್ಡ್ ನಲ್ಲಿ ಅಡ್ಮಿಟ್ ಆಗಿದ್ದಾರೆ. ಇಷ್ಟಾದರೂ, ಇದಕ್ಕೂ ನನಗು ಯಾವುದೇ ಸಂಬಂಧ ಇಲ್ಲ ಎಂಬಂತಿದ್ದಾರೆ ಸಿದ್ದರಾಜು.

short by Shraman / more at Prajaa TV

Comments