Skip to main content


ಮಾಜಿ ಪ್ರಧಾನಿ ಅಟಲ್​ ಜೀ ಆರೋಗ್ಯ ಸ್ಥಿರವಾಗಿದೆ: ಏಮ್ಸ್ ಸಂಸ್ಥೆ ಪತ್ರಿಕಾ ಪ್ರಕಟಣೆ

ಸುಮಾರು ವರ್ಷಗಳಿಂದ ಮಧುಮೇಹ ಮತ್ತು ಉಸಿರಾಟ ತೊಂದರೆಯಿಂದ ತೀವ್ರವಾಗಿ ಅಟಲ್‌ ಬಿಹಾರಿ ವಾಜಪೇಯಿ ಬಳಲುತ್ತಿದ್ದರು. ಸ್ಥಿತಿ ಗಂಭೀರವಾದಾಗ ಏಮ್ಸ್​ ಸಂಸ್ಥೆಯೇ ಆರೋಗ್ಯ ತಪಾಸಣೆ ನಡೆಸುತ್ತಿತ್ತು. ಆದರೆ, ಇಂದು ಕೂಡ ಅಟಲ್​ ಅವರ ಆರೋಗ್ಯದ ಸ್ಥಿತಿ ಹದಗೆಟ್ಟಿದ್ದು, ಬೆಳಿಗ್ಗೆ ಚಿಕಿತ್ಸೆಗಾಗಿ ಏಮ್ಸ್‌ಗೆ ದಾಖಲಿಸಲಾಗಿತ್ತು.

ಡಾ.ರಣದೀಪ್‌ ಗುಲೇರಿಯಾ ಅವರ ನೇತೃತ್ವದ ವೈದ್ಯರ ತಂಡ ವಾಜಪೇಯಿ ಅವರ ಆಗೋಗ್ಯದ ನಿಗಾವಹಿಸಿದ್ದಾರೆ. ಅಟಲ್‌ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಏಮ್ಸ್‌ ಅಧಿಕಾರಿಗಳು ಅಧಿಕೃತವಾಗಿ ತಿಳಿಸಿದ್ದು ಪ್ರೆಸ್​ನೋಟ್​ ಬಿಡುಗಡೆ ಮಾಡಿದ್ದಾರೆ.    

short by Pawan / more at News18

Comments