Skip to main content


ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಹಾಕಿದ ಶ್ರೀ ಮುರಳಿ

'ಹಮ್ ಫಿಟ್ ತೊ ಇಂಡಿಯಾ ಫಿಟ್' ಅಭಿಯಾನಕ್ಕೆ ಕನ್ನಡ ಸಿನಿಮಾರಂಗದಿಂದ ಭರ್ಜರಿ ಸಹಕಾರ ವ್ಯಕ್ತವಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಕಿದ್ದ ಚಾಲೆಂಜ್ ಅನ್ನು ನಟ ಶ್ರೀ ಮುರಳಿ ಸ್ವೀಕರಿಸಿದ್ದಾರೆ. ಜಿಮ್ ನಲ್ಲಿ ಭರ್ಜರಿ ಸ್ಟಂಟ್ಸ್ ಮಾಡುವ ಮೂಲಕ 'ಹಮ್ ಫಿಟ್ ತೊ ಇಂಡಿಯಾ ಫಿಟ್' ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ನಟ ಶ್ರೀ ಮುರಳಿ ಫಿಟ್ನೆನ್ಸ್ ಚಾಲೆಂಜ್ ಸ್ವೀಕರಿಸಿದ ನಂತರ ನಟ ದರ್ಶನ್ ಅವರಿಗೆ ಚಾಲೆಂಜ್ ಕ್ಲಿಯರ್ ಮಾಡಿ ಎಂದಿದ್ದಾರೆ. ಅವರ ಜೊತೆಯಲ್ಲಿ ಗಣೇಶ್, ಪ್ರಜ್ವಲ್ ಕೂಡ ಇದ್ದಾರೆ. ದರ್ಶನ್ ಜಿಮ್ ನಲ್ಲಿ ವರ್ಕ್ ಔಟ್ ಮಾಡುವುದನ್ನ ನೋಡುವ ಅವಕಾಶ ಅವರ ಅಭಿಮಾನಿಗಳಿಗೆ ಇಲ್ಲಿಯವರೆಗೂ ಸಿಕ್ಕಿಲ್ಲ. ಆದ್ದರಿಂದ ದರ್ಶನ್ ಏನಾದರೂ 'ಹಮ್ ಫಿಟ್ ತೊ ಇಂಡಿಯಾ ಫಿಟ್' ಚಾಲೆಂಜ್ ಸ್ವೀಕರಿಸಿದರೇ ಫ್ಯಾನ್ಸ್ ಗೆ ಡಿ ಬಾಸ್ ವರ್ಕ್ ಔಟ್ ನೋಡುವ ಚಾನ್ಸ್ ಸಿಗುತ್ತೆ.

short by Pawan / more at Filmibeat


Comments