Skip to main content


ಟಗರು ಶತದಿನೋತ್ಸವದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಚಿತ್ರ ತಂಡ!

ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ಅಭಿನಯದ `ಟಗರು’ ಸಿನಿಮಾ ನೂರು ದಿನ ಪೂರೈಸಿದ ಸಂದರ್ಭದಲ್ಲಿ ಚಿತ್ರತಂಡ ಅಭಿಮಾನಿಗಳಿಗೆ ಶುಭ ಸುದ್ದಿಯನ್ನು ನೀಡಿದೆ. ಇದೇ ಚಿತ್ರ ತಂಡದಿಂದ ಟಗರು-2 ಚಿತ್ರ ನಿರ್ಮಾಣವಾಗಲಿದ್ದು ಶಿವರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆಯಾಗಿ ನಟಿಸಲಿದ್ದಾರೆ ಎಂದು ನಿರ್ದೇಶಕ ಸೂರಿ ತಿಳಿಸಿದ್ದಾರೆ. ನಿನ್ನೆ ಶಿವರಾಜ್‍ಕುಮಾರ್ ಅಭಿಮಾನಿ ಸಂಘಗಳ ವತಿಯಿಂದ ಸಂತೋಷ್ ಚಿತ್ರಮಂದಿರದಲ್ಲಿ ನೂರನೇ ದಿನದ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು. ಟಗರು ಕಟೌಟ್‍ಗೆ ಹೂವಿನಹಾರ ಹಾಕಿ ಪಟಾಕಿ ಸಿಡಿಸಿದ ಅಭಿಮಾನಿಗಳು ಚಿತ್ರತಂಡವನ್ನ ಸಂತೋಷ್ ಚಿತ್ರಮಂದಿರಕ್ಕೆ ಬರಮಾಡಿಕೊಂಡರು.         

short by Pawan / more at Public Tv

Comments