Skip to main content


ಸ್ಟೈಲಿಷ್‌ ಗಡ್ಡಕ್ಕೂ ವಿಮೆ ಮಾಡಿಸಿದ ವಿರಾಟ್‌... ರಾಹುಲ್‌ ಟ್ವೀಟ್‌ ಮಾಡಿದ್ದೇನು?

ದೈಹಿಕ ಪಿಟ್ನೆಸ್‌ಗೆ ಸದಾ ಕಸರತ್ತು ನಡೆಸುವ ಕೊಹ್ಲಿ ಹ್ಯಾಂಡ್ಸಮ್‌ ಲುಕ್‌ನಿಂದಲೂ ಫೇಮಸ್‌ ಆಗಿದ್ದಾರೆ. ಅಲ್ಲದೆ ವಿರಾಟ್‌ ಕೊಹ್ಲಿ ತಮ್ಮ ಸ್ಟೈಲಿಷ್‌ ಗಡ್ಡಕ್ಕೆ ಸಹ ವಿಮೆ ಮಾಡಿಸಿಕೊಂಡಿದ್ದಾರಂತೆ..! ಹೌದು ಈ ಬಗ್ಗೆ ಕನ್ನಡಿಗ ಕೆ.ಎಲ್‌.ರಾಹುಲ್‌ ತಮ್ಮ ಟ್ವಿಟ್ಟರ್‌‌ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್‌ ಮಾಡಿದ್ದಾರೆ. ವಿಡಿಯೋದನ್ನು ವಿರಾಟ್‌ ಸೋಫಾ ಮೇಲೆ ಕುಳಿತಿದ್ದಾರೆ. ಅವರ ಪಕ್ಕದಲ್ಲಿರುವ ಇಬ್ಬರು ವಿರಾಟ್‌ ಗಡ್ಡದ ಫೋಟೋ ಕ್ಲಿಕ್‌ ಮಾಡುತ್ತಾರೆ. ಅಲ್ಲದೆ ಬಳಿಕ ವಿರಾಟ್ ಫೈಲ್‌ವೊಂದಕ್ಕೆ ಸಹಿ ಮಾಡುತ್ತಾರೆ. ಈ ವಿಡಿಯೋದೊಂದಿಗೆ ಟ್ವೀಟ್‌ ಮಾಡಿರುವ ರಾಹುಲ್‌, 'ಹಹ... ನನಗೆ ಗೊತ್ತು, ನೀವು ಗಡ್ಡದ ಬಗ್ಗೆ ಭಾರೀ ಕಾಳಜಿ ಹೊಂದಿದ್ದೀರಿ. ಆದರೆ ಈ ಸುದ್ದಿಯೇನೆಂದರೆ ನೀವು ಗಡ್ಡಕ್ಕೆ ವಿಮೆ ಮಾಡಿಸಿಕೊಂಡಿದ್ದೀರಿ ಎಂದು ನನಗನ್ನಿಸುತ್ತಿದೆ' ಎಂದು ವಿರಾಟ್‌ರ ಕಾಲೆಳೆದಿದ್ದಾರೆ.   

short by Pawan / more at Eenadu India

Comments