Skip to main content


ನಟ ಸಾರ್ವಭೌಮ ರೀಮೇಕ್ ಚಿತ್ರ ಅಲ್ಲ: ಸುಳ್ಳು ಸುದ್ದಿ ನಂಬಬೇಡಿ.!

'ಅಂಜನಿಪುತ್ರ' ಸಿನಿಮಾ ಬಳಿಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗ್ರೀನ್ ಸಿಗ್ನಲ್ ಕೊಟ್ಟಿರುವ ಚಿತ್ರವೇ 'ನಟ ಸಾರ್ವಭೌಮ'. 'ರಣ ವಿಕ್ರಮ' ಬಳಿಕ ಅಪ್ಪು ಹಾಗೂ ಪವನ್ ಒಡೆಯರ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಎರಡನೇ ಚಿತ್ರ ಇದು. 'ನಟ ಸಾರ್ವಭೌಮ' ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಫೋಟೋ ಜರ್ನಲಿಸ್ಟ್ ಎಂಬ ಸುದ್ದಿ ಹೊರಬಿದ್ಮೇಲೆ, ಇದು ರೀಮೇಕ್ ಸಿನಿಮಾ ಎಂಬ ಗುಸು ಗುಸು ಆರಂಭವಾಗಿದೆ. ಆದ್ರೆ, ಇದು ಸುಳ್ಳು ಸುದ್ದಿ ಅಂತ ಸ್ಪಷ್ಟ ಪಡಿಸುತ್ತಾರೆ ನಿರ್ದೇಶಕ ಪವನ್ ಒಡೆಯರ್. 'ನಟ ಸಾರ್ವಭೌಮ' ರೀಮೇಕ್ ಅಲ್ಲವೇ ಅಲ್ಲ. ಇದು ಒರಿಜಿನಲ್ ಸಿನಿಮಾ. ನಾನು ರೀಮೇಕ್ ಮಾಡಲ್ಲ'' ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳ್ತಾರೆ ಡೈರೆಕ್ಟರ್ ಪವನ್ ಒಡೆಯರ್.     

short by Pawan / more at Filmibeat


Comments