Skip to main content


ತಾಳ್ಮೆ ಕೊಟ್ಟ ಅವಕಾಶ; ಹರಿಪ್ರಿಯಾ ಆರರ ಕನಸು

ಒಂದು ಕಡೆ ಪ್ಯಾಶನೇಟ್‌ ಗರ್ಲ್, ಮತ್ತೂಂದು ಕಡೆ ಮಧ್ಯಮ ವರ್ಗದ ಹುಡುಗಿ, ಇನ್ನೊಂದು ಕಡೆ ಪೊಲೀಸ್‌ ಆಫೀಸರ್‌, ಡ್ಯಾನ್ಸರ್‌ ... ಒಂದಕ್ಕಿಂತ ಒಂದು ವಿಭಿನ್ನ ಪಾತ್ರ. ಬಹುಶಃ ಹರಿಪ್ರಿಯಾ ಖುಷಿಯಾಗಲು ಇದಕ್ಕಿಂತ ಇನ್ನೊಂದು ಬೇರೇನು ಕಾರಣ ಬೇಕಿಲ್ಲ. ಸದ್ಯ ಹರಿಪ್ರಿಯಾ ಕೈಯಲ್ಲಿ ಆರು ಸಿನಿಮಾಗಳಿವೆ. "ಲೈಫ್ ಜೊತೆಗೊಂದ್‌ ಸೆಲ್ಫಿ', "ಸೂಜಿದಾರ', "ಡಾಟರ್‌ ಆಫ್ ಪಾರ್ವತಮ್ಮ', "ಕಥಾಸಂಗಮ', "ಬೆಲ್‌ ಬಾಟಮ್‌' ಹಾಗೂ "ಕುರುಕ್ಷೇತ್ರ' ಚಿತ್ರಗಳಲ್ಲಿ ಹರಿಪ್ರಿಯಾ ನಟಿಸಿದ್ದಾರೆ. ಆರಕ್ಕೆ ಆರು ಸಿನಿಮಾಗಳಲ್ಲೂ ಹರಿಪ್ರಿಯಾ ಅವರ ಪಾತ್ರ ಭಿನ್ನವಾಗಿದೆಯಂತೆ. ಇದರಲ್ಲಿ ನಾಲ್ಕು ಸಿನಿಮಾಗಳ ಚಿತ್ರೀಕರಣ ಮುಗಿದು ಹೋಗಿದೆ. ಸದ್ಯ ಆ ಸಿನಿಮಾಗಳು ಚಿತ್ರೀಕರಣೋತ್ತರ ಕೆಲಸಗಳಲ್ಲಿ ಬಿಝಿ. 

"ಒಂದಕ್ಕಿಂತ ಒಂದು ಸಿನಿಮಾದಲ್ಲಿ ಪಾತ್ರಗಳು ಭಿನ್ನವಾಗಿವೆ. "ಲೈಫ್ ಜೊತೆಗೊಂದ್‌ ಸೆಲ್ಫಿ' ಚಿತ್ರದಲ್ಲಿ ಸ್ವತಂತ್ರವಾಗಿ ಓಡಾಡುವ, ನಿರ್ಧಾರ ತೆಗೆದುಕೊಳ್ಳುವ ಪ್ಯಾಶನೇಟ್‌ ಗರ್ಲ್ ಆಗಿ ಕಾಣಿಸಿಕೊಂಡರೆ, "ಸೂಜಿದಾರ'ದಲ್ಲಿ ತುಂಬಾ ಗಂಭೀರವಾದ ಪಾತ್ರ ಸಿಕ್ಕಿದೆ. ಪರ್‌ಫಾರ್ಮೆನ್ಸ್‌ಗೆ ಅವಕಾಶವಿರುವ ಪಾತ್ರ. ಇನ್ನು, "ಕಥಾ ಸಂಗಮ' ಏಳು ಕಥೆಯಲ್ಲಿನ ಒಂದು ಕಥೆಯಲ್ಲಿ ನಟಿಸಿದ್ದೇನೆ. "ಡಾಟರ್‌ ಆಫ್ ಪಾರ್ವತಮ್ಮ'ದಲ್ಲಿ ವೈದೇಹಿ ಪಾತ್ರ. ನನ್ನ ಸಿನಿ ಕೆರಿಯರ್‌ನಲ್ಲಿ ಈ ತರಹದ ಪಾತ್ರ ಮಾಡಿಲ್ಲ. ಖಡಕ್‌ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದೇನೆ. ಇನ್ನು, "ಕುರುಕ್ಷೇತ್ರ'ದ ಅದ್ಧೂರಿ ಹಾಡಿನಲ್ಲಿದ್ದೇನೆ. ಎಲ್ಲಾ ಸಿನಿಮಾಗಳ ಬಗ್ಗೆ ನಾನಂತು ತುಂಬಾ ಎಕ್ಸೈಟ್ ಆಗಿದ್ದೇನೆ' ಎಂದು ತಮ್ಮ ಪಾತ್ರದ ಬಗ್ಗೆ ಹೇಳುತ್ತಾರೆ ಹರಿಪ್ರಿಯಾ.    

short by Pawan / more at Udayavani

Comments