Skip to main content


ಜೋರು ಎಂಬ ಪದಕ್ಕೆ ಇನ್ನೊಂದು ಹೆಸರು ಕೊಡ್ತೀರಾ.?

ಅರೇ.. ಇದೇನಪ್ಪಾ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಕನ್ನಡ ಪಾಠ ಯಾವಾಗಿಂದ ಶುರು ಆಯ್ತು ಅನ್ಕೊಂಡ್ರಾ.? ಅಷ್ಟಕ್ಕೂ, 'ಜೋರು' ಎಂಬ ಪದಕ್ಕೆ ಇನ್ನೊಂದು ಹೆಸರು ಕೊಡ್ತೀರಾ.? ಅಂತ ನಾವು ಕೇಳ್ತಿಲ್ಲ. ಬದಲಾಗಿ ರೋರಿಂಗ್ ಸ್ಟಾರ್ ಶ್ರೀಮುರಳಿ ಕೇಳ್ತಿದ್ದಾರೆ. ಅದ್ಯಾಕೆ ಅಂದ್ರೆ, 'ಜೋರು' ಎಂಬ ಪದಕ್ಕೆ ಇರುವ ಇನ್ನೊಂದು ಹೆಸರೇ ಶ್ರೀಮುರಳಿ ಅವರ ಮುಂದಿನ ಚಿತ್ರದ ಶೀರ್ಷಿಕೆ. ತಮ್ಮ ಮುಂದಿನ ಚಿತ್ರ ಟೈಟಲ್ ಏನಿರಬಹುದು ಅಂತ ಅಭಿಮಾನಿಗಳೇ ಗೆಸ್ ಮಾಡಲಿ ಎಂದು ಫೇಸ್ ಬುಕ್ ನಲ್ಲಿ ನಟ ಶ್ರೀಮುರಳಿ ಒಂದು ಪೋಸ್ಟ್ ಹಾಕಿದ್ದಾರೆ.

ನಟ ಶ್ರೀಮುರಳಿ ಕೊಟ್ಟಿರುವ ಕ್ಲೂ ಮೇರೆಗೆ, ಅವರ ಮುಂದಿನ ಚಿತ್ರದ ಶೀರ್ಷಿಕೆ ಏನಿರಬಹುದು ಅಂತ ಹಲವರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಕೆಲವರು 'ರಭಸ' ಅಥವಾ 'ವೇಗಧೂತ' ಇರಬಹುದು ಅಂತ ಊಹೆ ಮಾಡ್ತಿದ್ದಾರೆ. ಅಸಲಿಗೆ, ಶ್ರೀಮುರಳಿ ಮುಂಬರುವ ಚಿತ್ರದ ಟೈಟಲ್ ಏನು ಅಂತ ನಮಗೂ ಗೊತ್ತಿಲ್ಲ. ಆದಷ್ಟು ಬೇಗ ರಿವೀಲ್ ಮಾಡುವೆ ಅಂತಾರೆ ನಟ ಶ್ರೀಮುರಳಿ. ಅಂದ್ಹಾಗೆ, ಶ್ರೀಮುರಳಿ ಗೆ ಈ ಬಾರಿ ಆಕ್ಷನ್ ಕಟ್ ಹೇಳ್ತಿರೋದು 'ಬಹದ್ದೂರ್' ಚೇತನ್.   

short by Pawan / more at Filmibeat

Comments