Skip to main content


ಬಳ್ಳಾರಿಯಲ್ಲಿ ಕಾಣಿಸಿಕೊಂಡ ಅಪ್ಪು!!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಿನಿಮಾ ಅಂದ್ರೆ ಸಾಕು ಅಲ್ಲಿ ಸಾಕಷ್ಟು ನಿರೀಕ್ಷೆಗಳು ಇರುತ್ತವೆ. ಸ್ಟೇಜ್ ಮೇಲೆ ಕುಣಿಯಲಾರಂಭಿಸಿದರೆ ಅಲ್ಲಿ ಪವರ್ ಪಾಸ್ ಆಗುತ್ತದೆ. ಡ್ಯಾನ್ಸ್ ಗೆ ಮಾತ್ರವಲ್ಲದೆ ಇವರು ಹಾಡಿನಲ್ಲೂ ಸೈ. ಪುನೀತ್ ಅಭಿನಯದ ರಾಜಕುಮಾರ ಚಿತ್ರ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಅದರಲ್ಲೂ ರಾಜಕುಮಾರ ಚಿತ್ರದ "ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ" ಅನ್ನೋ ಹಾಡು ಸಾಕಷ್ಟು ಜನಪ್ರಿಯಗೊಂಡಿತ್ತು. ಹಾಗೂ ರಾಜ್ ಕುಮಾರ್ ಅವರೇ ಪುನಃ ಬಂದಂತಿತ್ತು. ಆದರೆ ಈ ಹಾಡನ್ನು ಸ್ವತಃ ಅಪ್ಪು ಪುನೀತ್ ರಾಜ್ ಕುಮಾರ್ ಅವರೇ ಹಾಡಿದ್ದಾರೆ. ನಿನ್ನೆ ರಾತ್ರಿ ಬಳ್ಳಾರಿಯ ತೋರಣಗಲ್​ನ ಜಿಂದಾಲ್ ವಿದ್ಯಾನಗರದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಹಾಡಿದ್ದಾರೆ.

ನಟ ಸಾರ್ವಭೌಮ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಪವರ್ ಸ್ಟಾರ್ ಪುನೀತ್ ಬಿಡುವಿನ ವೇಳೆಯಲ್ಲಿ ಕವಯತ್ರಿ ಜಿಂದಾಲ್ ಸಂಸ್ಥೆಯ ಲತಾ ನಾವೆಲ್ ಅವರು ರಚಿಸಿದ ಹೊಸ ಆಲ್ಬಂ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದರು.

ಅಲ್ಲಿ ಲತಾ ಅವರ ಆಲ್ಬಂ ಅನ್ನು ಬಿಡುಗಡೆ ಮಾಡಿದ ಪವರ್​ ಸ್ಟಾರ್​ 'ರಾಜಕುಮಾರ' ಚಿತ್ರದ ಹಾಡನ್ನು ಹಾಡಿ ಎಲ್ಲರನ್ನೂಖುಷಿ ಪಡಿಸಿದ್ದಾರೆ. ಪುನೀತ್ ರಾಜ್​ಕುಮಾರ್ ಹಾಡುತ್ತಿದ್ದಂತೆ ಪ್ರೇಕ್ಷಕರು ಕುಣಿದು ಕುಪ್ಪಳಿದರು.   

short by Pawan / more at Balkani News

Comments