Skip to main content


ಬ್ಯಾಂಕ್ ಗ್ರಾಹಕರೇ ಕಟ್ಟೆಚ್ಚರ ..!

ಕೆಲ ದಿನಗಳ ಹಿಂದೆ ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ತಲ್ಲಣಗೊಳಿಸುವ 'ಸರ್ಜಿಕಲ್ ಸ್ಟ್ರೈಕ್' ಅನ್ನು ಅಂತಾರಾಷ್ಟ್ರೀಯ ಸೈಬರ್ ಕಳ್ಳರ ಜಾಲವು ನಡೆಸಿದ್ದು, ಈಗ ದಾಳಿಕೋರರ ಮೂಲ ಭೇದಿಸುವುದು ರಾಜ್ಯ ಸಿಐಡಿ ಸೈಬರ್ ಕ್ರೈಂ ಸೇರಿದಂತೆ 34 ದೇಶಗಳ ತನಿಖಾ ಸಂಸ್ಥೆಗಳಿಗೆ ಸವಾಲಾಗಿ ಪರಿಣಿಸಿದೆ. ಇದೇ ಮೊದಲ ಬಾರಿಗೆ ಭಾರತದ ಮಟ್ಟಿಗೆ ಬ್ಯಾಂಕ್‌ನ ಸರ್ವರ್‌ಗೇ ಕನ್ನ ಹಾಕಿ 37 ಕೋಟಿ ದೋಚಿದ್ದಾರೆ. ಈ ದಾಳಿಗೆ ತಮಿಳುನಾಡಿನ ಚೆನ್ನೈನ ಸಿಟಿ ಯೂನಿಯನ್ ಬ್ಯಾಂಕ್ (ಸಿಯುಬಿ) ತುತ್ತಾಗಿದ್ದು, ಆ ಬ್ಯಾಂಕ್‌ನ ಗ್ರಾಹಕರ ನಕಲಿ ಎಟಿಎಂ ಕಾರ್ಡ್ ಬಳಸಿ ಭಾರತ ಸೇರಿ 34 ದೇಶಗಳಲ್ಲಿ ಹಣ ದೋಚಲಾಗಿದೆ. ಭಾರತದಲ್ಲಿ ಬೆಂಗಳೂರು ಹಾಗೂ ಮುಂಬೈ ನಗರದಲ್ಲಿ ಸೈಬರ್ ಕಳ್ಳರ ಕಿಸೆಗೆ ತಲಾ 1 ಕೋಟಿ ಸೇರಿದೆ ಎಂದು ಸಿಐಡಿ ಮೂಲಗಳು ಹೇಳಿವೆ.   

short by Pawan / more at Suvarna News

Comments