Skip to main content


ಗೃಹ ಸಾಲ ಬಡ್ಡಿ ಸಬ್ಸಿಡಿ: ಕೇಂದ್ರದಿಂದ ಶುಭ ಸುದ್ದಿ

ಮಧ್ಯಮ ವರ್ಗದ ಜನತೆಗೆ ಸ್ವಂತ ಸೂರು ಹೊಂದಲು ಅನುಕೂಲವಾಗುವಂತೆ ಕೇಂದ್ರ ಸರಕಾರ, ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ನಗರ) ಅಡಿಯಲ್ಲಿ ಬಡ್ಡಿ ಸಬ್ಸಿಡಿ ಪಡೆಯಲು ಅರ್ಹತೆ ಪಡೆಯುವ ಫ್ಲ್ಯಾಟ್‌ಗಳ ಕಾರ್ಪೆಟ್‌ ಏರಿಯಾದ ಮಿತಿಯನ್ನು ಶೇ.33ರಷ್ಟು ಹೆಚ್ಚಿಸಿದೆ. 

ಮಧ್ಯಮ-ಆದಾಯ ವರ್ಗದ (ಎಂಐಜಿ- ಐ ) ಗುಂಪಿನ ಜನತೆಗೆ ಕ್ರೆಡಿಟ್‌ ಲಿಂಕ್ಡ್‌ ಸಬ್ಸಿಡಿ ಸ್ಕೀಮ್‌ (ಸಿಎಲ್‌ಎಸ್‌ಎಸ್‌) ಯೋಜನೆಯನ್ವಯ ಬಡ್ಡಿ ಸಬ್ಸಿಡಿ ಪಡೆಯಲು ಅರ್ಹ ಫ್ಲ್ಯಾಟ್‌ಗಳ ಕಾರ್ಪೆಟ್‌ ಏರಿಯಾದ ಮಿತಿಯನ್ನು 120 ಚದರ ಮೀಟರ್‌ನಿಂದ 160 ಚದರ ಮೀಟರ್‌ ಅಥವಾ 1,722 ಚದರ ಅಡಿಗೆ ವಿಸ್ತರಿಸಲಾಗಿದೆ. ಹಾಗೂ ಎಂಐಜಿ- ಐಐ ವರ್ಗದಲ್ಲಿ 150 ಚದರ ಮೀಟರ್‌ನಿಂದ 200 ಚದರ ಮೀಟರ್‌ ಅಥವಾ 2,153 ಚದರ ಅಡಿಗೆ ವಿಸ್ತರಿಸಲಾಗಿದೆ.

ಈ ಹಿಂದೆ (ಎಂಐಜಿ- ಐ ) ಕ್ಕೆ 120 ಚದರ ಮೀಟರ್‌ ಅಥವಾ 1,291 ಚದರ ಅಡಿ ಮತ್ತು ಎಂಐಜಿ ಐಐ ವರ್ಗದಲ್ಲಿ 150 ಚದರ ಮೀಟರ್‌ ಅಥವಾ 1,614 ಚದರ ಅಡಿಗೆ ನಿಗದಿಯಾಗಿತ್ತು. ಇದೀಗ ಮಿತಿ ವಿಸ್ತರಣೆಯ ಪರಿಣಾಮ ನಿರ್ಮಾಣ ವಲಯಕ್ಕೆ ಭಾರಿ ಉತ್ತೇಜನ ಸಿಗುವ ನಿರೀಕ್ಷೆ ಇದೆ. ಆರ್ಥಿಕ ಚಟುವಟಿಕೆ ವೃದ್ಧಿಸುವ ಸಾಧ್ಯತೆ ಇದೆ ಎಂದು ರಿಯಾಲ್ಟಿ ವಲಯದ ಪ್ರಾತಿನಿಧಿಕ ಸಂಸ್ಥೆ ಕ್ರೆಡಾಯ್‌ನ ಅಧ್ಯಕ್ಷ ಜಕ್ಸೆ ಶಾ ಹೇಳಿದ್ದಾರೆ.    

short by Pawan / more at Vijayakarnataka

Comments