Skip to main content


ಕೇಸರಿ ಆಯ್ತು, ಕಪ್ಪು ವರ್ಣದಲ್ಲೂ ಕಂಗೊಳಿಸಲಿರುವ ಕೆಟಿಎಂ

ಆಸ್ಟ್ರೀಯಾ ಮೂಲದ ಕೆಟಿಎಂ ಬೈಕ್ ದೇಶದಲ್ಲಿ ಅತಿ ಹೆಚ್ಚು ಸದ್ದು ಮಾಡಿದೆ. ಯುವ ಮನಸ್ಕರನ್ನು ಅತಿ ಹೆಚ್ಚು ಸೆಳೆದಿರುವ ಈ ಕೇಸರಿ ಬೈಕ್ ಇದೀಗ ಕಪ್ಪು ವರ್ಣದಲ್ಲೂ ಕಂಗೊಳಿಸಲಿದೆ. ನೂತನ ಕೆಟಿಎಂ ಆರ್‌ 200 ಮಾದರಿಯ ಕಪ್ಪು ವರ್ಣದ ಮಾದರಿಯನ್ನು ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಬೆಲೆಯಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ.

ಎಂಟ್ರಿ ಲೆವೆಲ್ ಸೂಪರ್ ಸ್ಪೋರ್ಟ್ ಶೈಲಿಯ ಕೆಟಿಎಂ ಆರ್‌ಸಿ 200 ಬೈಕ್, ಟ್ರೆಲ್ಲಿಸ್ ಫ್ರೇಮ್, ಅಲ್ಯೂಮಿನಿಯಂ ಸ್ವಿಂಗ್ ಆರ್ಮ್ ವ್ಯವಸ್ಥೆಯನ್ನು ಪಡೆದಿದೆ. ಟ್ರ್ಯಾಂಕ್ ರೇಸಿಂಗ್ ಜತೆ ಏರೋಡೈನಾಮಿಕ್ ವಿನ್ಯಾಸ ಹೆಚ್ಚು ಆಕರ್ಷಣೆಯಾಗಿದೆ. ಅಪ್ ಸೈಡ್ ಡೌನ್ ಫ್ರಂಟ್ ಫಾರ್ಕ್, ಬಹು ಕ್ರಿಯಾತ್ಮಕ ಡಿಜಿಟಲ್ ಕನ್ಸಾಲ್, ಅಗಲವಾದಚಕ್ರಗಳು, ಉತ್ತಮ ಹ್ಯಾಂಡ್ಲಿಂಗ್‌ ಇತ್ಯಾದಿ ವಿಶಿಷ್ಟತೆಯನ್ನು ಪಡೆದುಕೊಂಡಿದೆ.   

short by Pawan / more at Vijayakarnataka

Comments