Skip to main content


ವಯಸ್ಸು ಚಿಕ್ಕದು ಸಾಧನೆ ದೊಡ್ಡದು: ಪವನ್ ಕುಮಾರ್ ಎನ್.ಆರ್ ಎಂಬ ಅದ್ಭುತ ಶಕ್ತಿ!

ಸಾಧನೆಗೆ ಯಾವುದು ಅಡ್ಡಿಯಿಲ್ಲ ಎಂಬುದು ಒಂದು ಮಾತು. ಆದರೆ ಸಾಧನೆಗೆ ವಯಸ್ಸೂ ಕೂಡಾ ಲೆಕ್ಕ ಇರಲ್ಲ ಎಂಬುದು ಇವರನ್ನು ನೋಡಿದರೆ ಅರ್ಥವಾಗುತ್ತದೆ. ಹೌದು , ಪವನ್ ಕುಮಾರ್ ಎನ್​ ಆರ್​ ಹೆಸರಿನ ಇವರು ಜನ ಮಾನಸದಲ್ಲಿ ಸಾಧಕ ಎಂದೇ ಬಿಂಬಿತರಾಗಿರುವವರು. ಇವರ ವಯಸ್ಸು ಇದೀಗ ಕೇವಲ 20 ವರ್ಷ. ಇವರ ಸಾಧನೆ ಮಾತ್ರ 200 ವರ್ಷದ್ದು. ಈಗ ಇವರು ವಿದ್ಯಾರ್ಥಿಯೂ ಹೌದು, ಇಂಟರ್ನೆಟ್ ಉದ್ಯಮಿಯೂ ಹೌದು. ಲೀಲಾಜಾಲವಾಗಿ ಕಂಪ್ಯೂಟರ್ನಲ್ಲಿ ಪ್ರೋಗ್ರಾಮ್ ಗಳನ್ನು ಬರೆಯಬಲ್ಲ ಕಂಪ್ಯೂಟರ್ ಪ್ರೋಗ್ರಾಮಿನರ್ ಆಗಿರುವವರು ಇವರು. ವಯಸ್ಸಿನಲ್ಲಿ ಚಿಕ್ಕವರಾದ ಇವರು ಸಾಧನೆಯಲ್ಲಿ ಮಾತ್ರ ಮಹತ್ತರ ಎತ್ತರ ಬೆಳೆದ ಅದ್ಭುತ ಪ್ರತಿಭೆ. ತಮ್ಮ ಈ ವಯಸ್ಸಿನಲ್ಲಿಯೇ ತಮ್ಮ ಕೊಠಡಿಯನ್ನು ಸ್ವಾಡ್ ರೂಮ್‌ಆಗಿ ಬದಲಾಯಿಸಿಕೊಂಡ ಪ್ರತಿಭಾನ್ವಿತ ವ್ಯಕ್ತಿತ್ವದ, ಸೃಜನಶೀಲ ಹಾಗೂ ಹೊಸತನದತ್ತ ಮುಖ ಮಾಡಿದ ಯುವ ಪ್ರತಿಭೆ.

ಪವನ್ ಕುಮಾರ್ ಎನ್​ ಆರ್ ಅಕ್ಟೋಬರ್ 27, 1997 ರಲ್ಲಿ ಕರ್ನಾಟಕದ ಚಿತ್ರದುರ್ಗ ನಗರದಲ್ಲಿರುವ ಕುರುಬ ಕುಟುಂಬದಲ್ಲಿ ಜನಿಸಿದರು. ಇವರು ರುದ್ರಮುನಿ ಹಾಗೂ ನಿರ್ಮಲಾ ದಂಪತಿಗಳ ಸುಪುತ್ರ. ತಂದೆ ರುದ್ರಮುನಿಯವರು ಚಿತ್ರದುರ್ಗ ಜಿಲ್ಲೆಯ KVIC CSP ಕೇಂದ್ರೀಯ ಗವರ್ನಮೆಂಟ್ ಉದ್ಯೋಗಿಯಾಗಿದ್ದು, ತಾಯಿ ನಿರ್ಮಲಾ ಗೃಹಿಣಿಯಾಗಿದ್ದಾರೆ. ಮಂಗಳೂರಿನಲ್ಲಿರುವ ಶ್ರೀನಿವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸದ್ಯ ಸಿವಿಲ್ ಇಂಜಿನಿಯರಿಂಗ್ ಓದುತ್ತಿರುವ ಇವರು 2017 ರ ಫೆಬ್ರವರಿ 19 ರಂದು ಗ್ಲೋಬಲ್ ನ್ಯೂಸ್ ಮೀಡಿಯಾ ಆಧಾರಿತ “ಸ್ಕ್ವಾಡ್” ಅನ್ನೋ ಹೆಸರಿನ ವೆಬ್​ಸೈಟ್​ ಅನ್ನು ರಚಿಸಿ, ಅದರಲ್ಲಿ ಇಂದು ಉನ್ನತ ಮಟ್ಟದ ಯಶಸ್ಸು ಗಳಿಸಿದ್ದಾರೆ. “ಸ್ಕ್ವಾಡ್” ಸೈಟ್​ ಒಂದು ಜಾಗತಿಕ, ಮನರಂಜನೆ ಮತ್ತು ಸುದ್ದಿ-ಮಾಧ್ಯಮ ಆಧಾರಿತ ಸಾಮಾಜಿಕ ನೆಟ್​ವರ್ಕ್ ವೆಬ್​ಸೈಟ್​ ಆಗಿದ್ದು, ಆ ಮೂಲಕ ಇಂದು ರಾಜ್ಯ, ರಾಷ್ಟ್ರಮಟ್ಟದಲ್ಲೂ ಹೆಸರು ಪಡೆಯುತ್ತಿದ್ದಾರೆ. ಈ ಸಾಧನೆ ಇವರು ಮಾಡಿದ್ದು ಈ 19ರ ವಯೋಮಾನದಲ್ಲಿ ಎಂಬುದೇ ಎಲ್ಲರೂ ಮೂಗಿನ ಮೇಲೆ ಬೆರಳಿಡುವ ಸಂಗತಿ.     

short by Pawan / more at Satwadhara

Comments