Skip to main content


ಗದ್ದೆಯಲ್ಲಿ ಸೀತಾರಾಮನ ಪರಾಕ್ರಮ

ಹರ್ಷ ನಿರ್ದೇಶನದಲ್ಲಿ ನಿರ್ವಣವಾಗುತ್ತಿರುವ ‘ಸೀತಾರಾಮ ಕಲ್ಯಾಣ’ ಚಿತ್ರ ಹಲವು ಕಾರಣಗಳಿಂದ ಸುದ್ದಿಯಾಗುತ್ತಿದೆ. ಅದೇ ರೀತಿ ನಾಯಕ ನಿಖಿಲ್ ಕುಮಾರಸ್ವಾಮಿ ಎಂಟ್ರಿ ದೃಶ್ಯಕ್ಕೆ ಸಂಬಂಧಿಸಿದಂತೆಯೂ, ಚಿತ್ರತಂಡ ಇದೀಗ ಹೊಸ ಸಾಹಸಗಳಿಗೆ ಕೈಹಾಕಿದೆ.

ಕೆಲ ತಿಂಗಳಿನಿಂದ ವಿಧಾನಸಭೆ ಚುನಾವಣಾ ಪ್ರಚಾರ ಕಾರ್ಯದಲ್ಲೇ ಬಿಜಿಯಾಗಿದ್ದ ನಿಖಿಲ್, ಇದೀಗ ‘ಸೀತಾರಾಮ..’ ಸೆಟ್​ನತ್ತ ಮುಖ ಮಾಡಿದ್ದಾರೆ. ಚಿತ್ರದಲ್ಲಿ ಅಬ್ಬರದ ಫೈಟ್ ಮೂಲಕ ನಿಖಿಲ್ ಆಗಮನವಾಗಲಿದ್ದು, ಆ ದೃಶ್ಯಗಳನ್ನು ಸೆರೆಹಿಡಿಯುವ ಉದ್ದೇಶದಿಂದ ಮೈಸೂರಿನ ಹೊರವಲಯದ ಗದ್ದೆಯಲ್ಲಿ ಬೀಡುಬಿಟ್ಟಿದ್ದಾರೆ ನಿರ್ದೇಶಕ ಹರ್ಷ.

ಆಕ್ಷನ್ ಸೀನ್​ಗಳಿಗೆ ಅಂತಲೇ ಸಾವಿರ ಫ್ರೇಮ್್ಸ ಹೈಸ್ಪೀಡ್ ಸ್ಲೋಮೋಷನ್ ಫ್ಯಾಂಟಮ್ ಕ್ಯಾಮರಾವನ್ನು ಚಿತ್ರತಂಡ ಬಳಸಿಕೊಳ್ಳುತ್ತಿದೆ. ಸಾಮಾನ್ಯ ಕ್ಯಾಮರಾದ ದೃಶ್ಯಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ದೃಶ್ಯಗಳನ್ನು ಈ ಕ್ಯಾಮರಾದಿಂದ ಸೆರೆಹಿಡಿಯಬಹುದಂತೆ.    

short by Pawan / more at Vijayavani

Comments