Skip to main content


ತರಕಾರಿ ತರಲು ಹೋದ ಮಹಿಳೆ ನಾಪತ್ತೆ... ಹೆಬ್ಬಾವು ಹೊಟ್ಟೆ ಸೀಳಿದಾಗ ಶವ ಪತ್ತೆ!

54 ವರ್ಷದ ವಾ ಟಿಬಾ ಎಂಬಾಕೆ ತೋಟದಲ್ಲಿ ಬೆಳೆದ ತರಕಾರಿಗಳನ್ನು ಕಟ್‌ ಮಾಡಲು ಹೋದ ಸಂದರ್ಭದಲ್ಲಿ ಆಕೆ ಮೇಲೆ ಹೆಬ್ಬಾವು ದಾಳಿ ಮಾಡಿ ನುಂಗಿದೆ. ಇತ್ತ ತೋಟಕ್ಕೆ ತರಕಾರಿ ತರಲು ಹೋಗಿದ್ದ ವಾ ಟಿಬಾ ಮರಳಿ ಬಾರದಿದ್ದಾಗ ಕುಟುಂಬಸ್ಥರು ಗಾಬರಿಗೊಂಡಿದ್ದಾರೆ. ಬಳಿಕ ಆಕೆಯನ್ನು ಹುಡುಕಲಾರಂಭಿಸಿದಾಗ ತರಕಾರಿ ಕಟ್‌ ಮಾಡಲು ತಂದಿದ್ದ ಉಪಕರಣ ಕಂಡಿದೆ. ಸ್ವಲ್ಪ ದೂರದಲ್ಲಿ 23 ಅಡಿ ಉದ್ದದ ಹೆಬ್ಬಾವೊಂದು ಕಾಣಿಸಿಕೊಂಡಿದ್ದು, ಕುಟುಂಬಸ್ಥರು ಅದನ್ನು ಅಚ್ಚರಿಯಿಂದ ನೋಡಿದ್ದಾರೆ. ಬಳಿಕ ಹೆಬ್ಬಾವು ಹೊಟ್ಟೆ ನೋಡಿದ ಕುಟುಂಬಸ್ಥರು ವಾ ಟಿಬಾಳನ್ನು ನುಂಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಬಳಿಕ ಹೆಬ್ಬಾವಿನ ಹೊಟ್ಟೆ ಭಾಗವನ್ನು ಕೊಯ್ದು ನೋಡಿದಾಗ ವಾ-ಟಿಬಾಳನ್ನು ನುಂಗಿರುವುದು ಬೆಳಕಿಗೆ ಬಂದಿದೆ.  

short by Pawan!

Comments