Skip to main content


ಒಂದೇ ದಿನದಲ್ಲಿ ಲಕ್ಷ ವೀವ್ಸ್ ಪಡೆದ ದಡ್ಡ ದಡ್ಡ ಸಾಂಗ್

ರಿಶಬ್ ಶೆಟ್ಟಿ ನಿರ್ದೇಶನ ಮಾಡಿರುವ "ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು" ಚಿತ್ರದ ವಿಡಿಯೋ ಸಾಂಗ್ ವೊಂದು ಯ್ಯೂಟ್ಯೂಬ್ ನಲ್ಲಿ ನಿನ್ನೆ ಬಿಡುಗಡೆಯಾಗಿತ್ತು. ಆ ಸಾಂಗ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೀಗ ಆ ಸಾಂಗ್ ನೋಡುಗರಿಂದ ಒಂದು ಲಕ್ಷಕ್ಕೂ ಅಧಿಕ್ ವೀವ್ಸ್ ಪಡೆದುಕೊಂಡಿದೆ.

`ಕಿರಿಕ್ ಪಾರ್ಟಿ' ಚಿತ್ರದ ನಂತರ ತಾವೊಂದು ಮಕ್ಕಳ ಚಿತ್ರ ಮಾಡುವುದಾಗಿ ರಿಷಬ್ ಶೆಟ್ಟಿ ಈ ಹಿಂದೆಯೇ ಹೇಳಿಕೊಂಡಿದ್ದರು.ಇದೀಗ ಈ ಚಿತ್ರ ಶುರುವಾಗಿದೆ. ಈ ಚಿತ್ರದ ಮೂಲಕ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿರೋದನ್ನು ಸಂಪೂರ್ಣ ಹಾಸ್ಯಮಯವಾಗಿ ಹೇಳುವುದಕ್ಕೆ ಹೊರಟಿದ್ದಾರಂತೆ ರಿಷಬ್. ಇದೊಂದು ಮಕ್ಕಳ ಚಿತ್ರವಾಗಿದ್ದು, ಈ ಚಿತ್ರವನ್ನು ಅವರೇ ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವು ಸ್ಯಾಂಡಲ್ ವುಡ್ ನಲ್ಲಿ ಹೊಸತನ ಬರೆಯಲಾಗುತ್ತದೆ ಎಂದು ಹಲವರು ಮಾತನಾಡಿಕೊಳ‍್ಳುತ್ತಿದ್ದಾರೆ.    

short by Pawan!

Comments