Skip to main content


ಅಂತಿಮ ಕ್ಷಣದಲ್ಲಿ ಕೃಷ್ಣನ ಪಾತ್ರಕ್ಕೆ ಮಹತ್ವದ ಬದಲಾವಣೆ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಕುರುಕ್ಷೇತ್ರ' ಸಿನಿಮಾ ಶೂಟಿಂಗ್ ಮುಗಿಸಿ ಡಬ್ಬಿಂಗ್ ಕೆಲಸದಲ್ಲಿ ತೊಡಗಿಕೊಂಡಿದೆ. ಚಿತ್ರತಂಡ ಕ್ರೇಜಿಸ್ಟಾರ್ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್ ನೀಡಿದೆ. ಕೃಷ್ಣನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವ ರವಿಚಂದ್ರನ್ ತನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. ಅಂದ್ರೆ, ಬೇರೊಬ್ಬ ಕಲಾವಿದರಿಂದ ಈ ಪಾತ್ರಕ್ಕೆ ಕಂಠದಾನ ಮಾಡಲು ಮುಂದಾಗಿದ್ದಾರೆ. ಚಿತ್ರದಲ್ಲಿ ನಾಟಕದ ಶೈಲಿಯ ಡೈಲಾಗ್‌ಗಳಿದ್ದು ರವಿಚಂದ್ರನ್ ಪಾತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದ್ದು, ಡಬ್ಬಿಂಗ್ ಇನ್ನೊಬ್ಬ ಕಲಾವಿದರನ್ನ ಕರೆತರುವ ಯೋಜನೆಯಲ್ಲಿದೆ.       

short by Pawan / more at Filmibeat

Comments